ಪ್ಲಸ್ಟು ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪ್ಲಸ್ ಟು ವಿದ್ಯಾರ್ಥಿನಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಕೆ. ಮೀರಾ (17) ಇಂದು ಬೆಳಿಗ್ಗೆ ಮನೆಯ ಕಿಟಿಕಿಯ ಸರಳಿಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಗೆ ತೆರಳಲು ಸಾಧ್ಯವಾಗದಿರುವುದರಿಂದ ಮನನೊಂದು ಈಕೆ ನೇಣು ಬಿಗಿದಿರಬಹುದೆಂದು ಅಂದಾಜಿಸಲಾಗಿದೆ. ಕಳೆದ ರಾಜ್ಯ ಶಾಲಾ ಕಲೋತ್ಸವದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಮೀರಾ ಶಿಕ್ಷಣದಲ್ಲೂ ಮುಂದಿದ್ದಳು. ಈಕೆ ಉದಿನೂರು ಇಯಕ್ಕಾಡ್ನ ದಿ| ಸುಮಿತ್ರನ್- ಸೀಮಾ ಕಲ್ಲತ್ ದಂಪತಿಯ ಪುತ್ರಿಯಾಗಿದ್ದಾಳೆ. ಸಾವಿನ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.