ಪ್ಲಸ್‌ಟು ವಿದ್ಯಾರ್ಥಿ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಪ್ಲಸ್ ಟು ವಿದ್ಯಾ ರ್ಥಿ ಹೃದಯಾ ಘಾತದಿಂದ ನಿಧನ ಹೊಂದಿ ದನು. ವೆಳ್ಳೂರು ಆಲಿಂಗಿಯಿಲ್‌ನಲ್ಲಿ ವಾಸಿಸುವ ತೃಕರಿಪುರ ಉದಿನೂರು ನಿವಾಸಿ, ಟಿ.ಪಿ. ಸುಹೈಲ್- ಸುಮಯ್ಯ ದಂಪತಿ ಪುತ್ರ ಹಾಶಿರ್ (18) ಮೃತಪಟ್ಟ ವಿದ್ಯಾರ್ಥಿ. ವೆಳ್ಳೂರ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ಶಾಲೆ ಯಿಂದ ಮನೆ ಸಮೀಪದ ಮಸೀದಿ ಗೆಂದು ತೆರಳುತ್ತಿದ್ದ ಮಧ್ಯೆ ಕುಸಿದು ಬಿದ್ದಿದ್ದನು. ಇದನ್ನು ಕಂಡ ಆಟೋ ಚಾಲಕ ಹಾಶಿರ್‌ನನ್ನು ಕೂಡಲೇ ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತ ವಿದ್ಯಾರ್ಥಿ ತಂದೆ, ತಾಯಿ, ಸಹೋದರ -ಸಹೋದರಿ ಯರಾದ ಸಫ, ಸನ, ಸಿಯಾ, ಸಹಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page