ಪ್ಲಸ್‌ವನ್: ಟ್ರಯಲ್ ಅಲೋಟ್‌ಮೆಂಟ್ ಲಿಸ್ಟ್ ನಾಳೆ ಪ್ರಕಟ: ಸೀಟಿನ ಜೊತೆಗೆ ಬ್ಯಾಚ್ ಹೆಚ್ಚಿಸಬೇಕೆಂಬ ಬೇಡಿಕೆ ತೀವ್ರ

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದ ಪ್ಲಸ್ವನ್ಗೆ ಅರ್ಜಿ ಸಲ್ಲಿಸಿದವರ ಟ್ರಯಲ್ ಅಲೋಟ್ ಮೆಂಟ್ ಲಿಸ್ಟ್ ನಾಳೆ ಪ್ರಕಟವಾಗಲಿ ರುವಂತೆಯೇ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಸೀಟು ಸಮಸ್ಯೆ ಉಂಟಾ ಗಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ 20,473 ಮಂದಿ ಅರ್ಹತೆ ಪಡೆದಿದ್ದಾರೆ. ಈ ಪೈಕಿ 10,649 ಹುಡುಗರು, 9824 ಹುಡುಗಿ ಯರಾಗಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಒಟ್ಟು ಪ್ಲಸ್ವನ್ ಸೀಟುಗಳು 18,505 ಆಗಿದೆ. ಸರಕಾರಿ ಶಾಲೆಗಳಲ್ಲಿ 11,780, ಐಡೆಡ್ ಶಾಲೆಗಳಲ್ಲಿ 4825, ಅನ್ಐಡೆಡ್ ಶಾಲೆಗಳಲ್ಲಿ 2100 ಸೀಟುಗಳಿವೆ. ಜಿಲ್ಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಲ್ಲಿಯೇ ಅರ್ಜಿ ಸಲ್ಲಿಸಿದರೆ ಎರಡುಸಾವಿರದಷ್ಟು ಸೀಟಗಳ ಕೊರತೆ ಉಂಟಾಗಲಿದೆ ಯೆಂದು ಅಂದಾಜಿಸಲಾಗಿದೆ. ಇದೇ ವೇಳೆ ಸೀಟು ಸಮಸ್ಯೆಗೆ ಪರಿಹಾರ ಕಾಣಬೇಕೆಂದು ವಿಪಕ್ಷ ವಿದ್ಯಾರ್ಥಿ ಸಂಘಟನೆಗಳು ಚಳವಳಿಗೆ ಮುಂದಾ ಗಿವೆ. ಈ ವೇಳೆ ಜಿಲ್ಲೆಯ ಎಲ್ಲಾ ಹೈಯರ್ ಸೆಕೆಂಡರಿ ಶಾಲೆಗಳಲ್ಲೂ ಆರ್ಥಿಕ ಸಂದಿಗ್ಧತೆ ಉಂಟಾಗದ ರೀತಿಯಲ್ಲಿ 30 ಶೇಕಡಾ, ಎಲ್ಲಾ ಐಡೆಡ್ ಶಾಲೆಗಳಲ್ಲಿ 20 ಶೇ. ಸೀಟು ಹೆಚ್ಚಳ ಮಾಡುವುದಾಗಿ ಸರಕಾರ ತಿಳಿಸಿದೆ. ಆದರೆ ಬ್ಯಾಚ್ಗಳ ಸಂಖ್ಯೆ ಹೆಚ್ಚಿಸದೆ ಕೇವಲ ಸೀಟು ಹೆಚ್ಚಿಸಿದರೆ ಪ್ರಯೋಜನವಿಲ್ಲ. ಬ್ಯಾಚ್ಗಳನ್ನು ಹೆಚ್ಚಿಸದಿದ್ದಲ್ಲಿ ಫಲಿತಾಂಶದ ಮೇಲೆ ಹೊಡೆತ ಬೀಳಬಹು ದೆಂದು ವಿದ್ಯಾರ್ಥಿ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

Leave a Reply

Your email address will not be published. Required fields are marked *

You cannot copy content of this page