ಪ್ಲಸ್ ವನ್ ವಿದ್ಯಾರ್ಥಿನಿಗೆ ಪ್ಲಸ್ ಟು ವಿದ್ಯಾರ್ಥಿನಿಯರಿಂದ ಹಲ್ಲೆ, ಬೆದರಿಕೆ: ಕೇಸು ದಾಖಲು
ಮಂಜೇಶ್ವರ: ಪ್ಲಸ್‌ವನ್ ವಿದ್ಯಾರ್ಥಿನಿಗೆ ಬಸ್ ಸ್ಟಾಪ್‌ನಲ್ಲಿ ಪ್ಲಸ್ ಟು ವಿದ್ಯಾರ್ಥಿನಿಯರು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿಗೆ ಅದೇ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯರು ಮುಖಕ್ಕೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಇತ್ತೀಚೆಗೆ ಶಾಲೆ ಬಿಟ್ಟು ನಯಬಜಾರ್‌ನ ಬಸ್‌ಸ್ಟಾಪ್‌ಗೆ ತಲುಪಿದಾಗ ವಿದ್ಯಾರ್ಥಿನಿಯರು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಗಾಯಗೊಂಡ ವಿದ್ಯಾರ್ಥಿನಿ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರು ಬೆದರಿಕೆಯೊಡ್ಡಿರುವುದಾಗಿಯೂ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.