ಪ್ಲಾಸ್ಟಿಕ್ ಸಹಿತ ನಿಷೇಧಿತ ಕ್ಯಾರಿಬ್ಯಾಗ್ ಪತ್ತೆಗೆ ತಪಾಸಣೆ ಆರಂಭ: ಪತ್ತೆಯಾದಲ್ಲಿ ಕಠಿಣ ಕ್ರಮ

ತಿರುವನಂತಪುರ:  ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮತ್ತೆ ಕಡ್ಡಾಯ ಗೊಳಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಹಾಗೂ ಉತ್ಪನ್ನಗಳನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆರೋಗ್ಯ ವಿಭಾಗ ಅಧಿಕಾರಿಗಳು ಹಾಗೂ ಪೊಲೀಸರು ಒಳಗೊಂಡ ಸ್ಕ್ವಾಡ್ ಇದಕ್ಕಾಗಿ ರೂಪೀಕರಿಸಲಾ ಗುವುದು. 2020 ಜನವರಿಯಲ್ಲಿ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜ್ಯಾರಿಗೊಳಿಸಲಾಗಿತ್ತು. ಆದರೆ ನಿಷೇಧಿತ ಪ್ಲಾಸ್ಟಿಕ್ ಈಗಲೂ ಯಥೇಷ್ಠ ಬಳಕೆಯಲ್ಲಿದೆ. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಕೇಂದ್ರದಲ್ಲಿ ನಿಲುಗಡೆಗೊಂಡಿದ್ದರೂ ಇತರ ರಾಜ್ಯಗಳಿಂದ ಇವು ಕೇರಳಕ್ಕೆ  ಭಾರೀ ಪ್ರಮಾಣದಲ್ಲಿ ತಲುಪುತ್ತಿದೆ. ನಿರಂತರವಾಗಿ ಮೂರು ಬಾರಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪತ್ತೆಹಚ್ಚಿದರೆ ೫೦ ಸಾವಿರ ರೂಪಾಯಿ ದಂಡ ಹೇರುವುದರ ಜೊತೆಗೆ ಅಂಗಡಿಯ ಪರವಾನಗಿ ರದ್ದುಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವವರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಲಾಗುವುದು. ಅದೇ ರೀತಿ ಇತರರಿಗೆ ತ್ಯಾಜ್ಯ ನೀಡುವವರಿಗೆ ೧೦ ಸಾವಿರ ರೂಪಾಯಿ ದಂಡ ಹೇರಲು ನಿರ್ಧರಿಸಲಾಗಿದೆ.

ಒಮ್ಮೆ ಮಾತ್ರ ಬಳಸಬಹುದಾದ ಹಾಗೂ ೫೦ ಮೈಕ್ರೋನ್‌ಗಿಂತ ಕೆಳಗಿನ ಪ್ಲಾಸ್ಟಿಕ್ ಉತ್ಪನ್ನಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page