ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಓರ್ವ ಮೃತ್ಯು: ಹಲವರಿಗೆ ಗಾಯ
ಹೊಸದುರ್ಗ: ತೃಕರಿಪುರ ಕರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿ ದ್ದಾರೆ. ಹಲವರಿಗೆ ಗಾಯವುಂ ಟಾಗಿದೆ. ಕಾಞಂಗಾಡ್ ಪುಂಜಾವಿ ಕಡಪ್ಪುರ ನಿವಾಸಿ ಹರಿದಾಸನ್ (57) ಮೃತಪಟ್ಟವರು. ಗಾಯ ಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದು ಪೊಲೀಸರು ಹಾಗೂ ಕರಾವಳಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತರು ಪತ್ನಿ ಸತ್ಯವತಿ, ಮಕ್ಕಳಾದ ಅರ್ಜುನ್, ಅರುಣ್, ಆದರ್ಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.