ಫೋನ್ ಕರೆ ಬಂದ ತಕ್ಷಣ ಪತ್ನಿ ಮನೆಯಿಂದ ಹೊರಹೋದ ಯುವಕ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ : ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ ಸಂಬಂಧಿಕರು
ಅಡೂರು: ವ್ಯಕ್ತಿಯೊಬ್ಬನಿಂದ ಫೋನ್ ಕರೆ ಬಂದ ಕೂಡಲೇ ಪತ್ನಿ ಮನೆಯಿಂದ ಹೊರಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದ ಯುವಕ ಪಯಸ್ವಿನಿ ಹೊಳೆಯ ಅತ್ತನಾಡಿಯಲ್ಲಿ ನಿಗೂಢ ವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ. ಕುತ್ತಿಕ್ಕೋಲ್ ವೆಳ್ಳಾಲದ ನಾರಾಯಣನ್ ಎಂಬವರ ಪುತ್ರ ರಾಜೇಶ್ (25) ಮೃತಪಟ್ಟ ವ್ಯಕ್ತಿ. ಪಾಂಡಿ ನಾಗತ್ತುಮೂಲೆಯಲ್ಲಿರುವ ಪತ್ನಿ ಮನೆಗೆ ಇವರು ತೆರಳಿದ್ದರೆನ್ನಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆ ವೇಳೆ ರಾಜೇಶ್‌ರಿಗೆ ಒಂದು ಫೋನ್ ಕರೆ ಬಂದಿದ್ದು, ಅನಂತರ ಅವರು ಮನೆಯಿಂದ ಹೊರಗೆ ತೆರಳಿದ್ದರೆಂದು ಪತ್ನಿಯ ತಾಯಿ ತಿಳಿಸಿದ್ದಾರೆ. ಅಂದು ಸಂಜೆವರೆಗೆ ರಾಜೇಶ್ ಮರಳಿ ಬಾರದ ಹಿನ್ನೆಲೆಯಲ್ಲಿ ಅವರ ಫೋನ್‌ಗೆ ಕರೆ ಮಾಡಿದ್ದು, ಆ ವೇಳೆ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ಅವರಿ ಗಾಗಿ ಶೋಧ ನಡೆಸುತ್ತಿರುವ ಮಧ್ಯೆ ಪಾಂಡಿ ನಿವಾಸಿಯಾದ ಓರ್ವ ಮನೆಗೆ ಬಂದು ರಾಜೇಶ್‌ರ ಫೋನ್‌ನ್ನು ನೀಡಿರುವು ದಾಗಿಯೂ ಪತ್ನಿಯ ತಾಯಿ ತಿಳಿಸಿದ್ದಾರೆ. ನಾವು ಇಬ್ಬರು ಜೊತೆ ಯಾಗಿ ಕುಳಿತು ಮದ್ಯ ಸೇವಿಸಿರುವು ದಾಗಿಯೂ, ರಾಜೇಶ್ ತನಗಿಂತ ಮೊದಲು ಬಾರ್‌ನಿಂದ ತೆರಳಿದ್ದಾನೆ. ಅನಂತರ ಒಂದು ಮೊಬೈಲ್ ಅಂಗಡಿ ಯಿಂದ 650 ರೂಪಾಯಿ ನೀಡಿ ಮೊಬೈಲ್ ಮರಳಿ ಖರೀದಿಸಿರು ವುದಾಗಿಯೂ ರಾಜೇಶ್‌ನ ಕೈಯಿಂದ 3000 ರೂಪಾಯಿ ಪಡೆದಿರುವುದಾಗಿ ಪಾಂಡಿ ನಿವಾಸಿ ತಿಳಿಸಿದ್ದಾನೆಂದು ರಾಜೇಶ್‌ರ ಪತ್ನಿಯ ತಾಯಿ ತಿಳಿಸಿ ದ್ದಾರೆ. ಹೊಳೆಯಿಂದ ಮೃತದೇಹವನ್ನು ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಗಿದೆ. ಇದೇ ವೇಳೆ ಆರೋಪಕ್ಕೆಡೆಯಾದ ಪಾಂಡಿ ನಿವಾಸಿಯನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದು ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಯ ಬಳಿಕವೇ ಸಾವಿಗೆ ಕಾರಣ ಸ್ಪಷ್ಟ ಗೊಳ್ಳಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತ ರಾಜೇಶ್ ತಂದೆ, ಪತ್ನಿ ಅಶ್ವತಿ, ಪುತ್ರ ಹರಿಪ್ರಸಾದ್, ಸಹೋದರರಾದ ಹರೀಶ್, ನಯನ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ರಾಜೇಶ್‌ರ ತಾಯಿ ನಾರಾಯಣಿ ಈ ಹಿಂದೆ ನಿಧನಹೊಂದಿದ್ದಾರೆ.