ಫ್ರಿಡ್ಜ್ ಸ್ಫೋಟಗೊಂಡು ವಿವಿಧ ಉಪಕರಣಗಳು ಹಾನಿ
ಕಾಸರಗೋಡು: ಮನೆಯೊಳಗೆ ಫ್ರಿಡ್ಜ್ ಸ್ಫೋಟಗೊಂಡು ಉಪಕರಣಗಳು ಸುಟ್ಟು ನಾಶವಾಗಿವೆ. ಕಳ್ಳಾರ್ ಕೊಟ್ಟೋಡಿಯ ಸಿ.ಜೆ.ಟ್ರೇಡರ್ಸ್ ಅಂಗಡಿ ಮಾಲಕ ಥೋಮಸ್‌ರ ಮನೆಯಲ್ಲಿ ಈ ದುರಂತವುಂಟಾಗಿದೆ. ಶನಿವಾರ ರಾತ್ರಿ 8 ಗಂಟೆಗೆ ಘಟನೆ ನಡೆದಿದೆ. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಕುತ್ತಿಕ್ಕೋಲ್‌ನಿಂದ ಅವರು ತಲುಪಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಗ್ರೈಂಡರ್, ಫ್ಯಾನ್ ಸಹಿತ ವಿವಿಧ ಉಪಕರಣಗಳು ಹಾನಿಯಾಗಿದ್ದು, ಮನೆ ಮಂದಿ ಇಲ್ಲದ ಸಮಯದಲ್ಲಿ ನಡೆದ ಘಟನೆಯಾದುದರಿಂದ ಹೆಚ್ಚಿನ ಅಪಾಯ ತಪ್ಪಿದೆ.