ಬಂಗ್ರಮಂಜೇಶ್ವರ ರಸ್ತೆ ತಿರುವಿನಲ್ಲಿ ಅಪಾಯ ಆಹ್ವಾನಿಸಿ ವಿದ್ಯುತ್ ಕಂಬದ ಆಧಾರ ತಂತಿ

ಮಂಜೇಶ್ವರ: ಬಂಗ್ರಮಂಜೇಶ್ವರ ರಸ್ತೆಯ ತಿರುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿ ವಾಹನ ಸವಾರರಿಗೆ ಆತಂಕ ಉಂಟುಮಾಡುತ್ತಿದೆ. ರಸ್ತೆ ಬದಿಯಲ್ಲಿ ರುವ ಈ ತಂತಿ ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರು ಭಾಗದಿಂದ ಬರುವ ವಾಹನಗಳಿಗೆ ಸರಿದುಹೋಗಲು ಸ್ಥಳ ನೀಡುವ ಮಧ್ಯೆ ತಂತಿಗೆ ಬಡಿದು ಅಪಾಯ ಉಂಟಾಗುವ ಭೀತಿ ಇದೆ. ಬಂಗ್ರಮಂಜೇಶ್ವರದ ಈ ದಾರಿಯಾಗಿ ಕಟ್ಟೆಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಗೆ ಹೊಸಂಗಡಿ  ಪೇಟೆಯಿಂದ ದಿನನಿತ್ಯ ನೂರಾರು ವಾಹನಗಳು ಸಂಚರಿ ಸುತ್ತಿವೆ. ಅಪಾಯಕ್ಕೆ ಆಹ್ವಾನ ನೀಡಿ ದಂತಿರುವ ಈ ಆಧಾರ ತಂತಿಯನ್ನು  ತೆರವುಗೊಳಿಸಿ ಸೂಕ್ತ ರೀತಿಯಲ್ಲಿ ಅಳವಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page