ಬಜೆಟ್ ಅಧಿವೇಶನದ ವರೆಗೆ ಜೆಪಿಸಿ ಅವಧಿ ವಿಸ್ತರಣೆಗೆ ಬೇಡಿಕೆ

ನವದೆಹಲಿ:  ವಕ್ಫ್  ತಿದ್ದು ಪಡಿ ಮಸೂದೆಯನ್ನು ಕೂಲಂ ಕುಶವಾಗಿ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯು ತನ್ನ ಅಧಿಕಾರಾ ವಧಿಯನ್ನು 2025ರ ಬಜೆಟ್ ಅಧಿವೇಶನ ವರೆಗೆ ವಿಸ್ತರಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಕೇಳಿಕೊಂಡಿದೆ. ಸಂಸತ್‌ನಲ್ಲಿ ನಡೆಯುತ್ತಿರುವ ಅಧಿವೇಶನದ ಮೊದಲು ಸಮಿತಿಯು ತನ್ನ ವರದಿ ಸಲ್ಲಿಸಲು ಈ ಹಿಂದೆ  ತೀರ್ಮಾನಿಸಿತ್ತು. ಆದರೆ ವಿವಿಧ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ವರದಿ ಸಲ್ಲಿಸುವ  ಅವಧಿ ವಿಸ್ತರಿಸುವಂತೆ ಸಮಿತಿ ಲೋಕಸಭಾ ಅಧ್ಯಕ್ಷರಲ್ಲಿ ವಿನಂತಿಸಿಕೊಂಡಿದೆ.

You cannot copy contents of this page