‘ಬಣ್ಣದಜ್ಜನ ಸ್ಮೃತಿಯಾನ’ ಕುಬಣೂರಿನಲ್ಲಿ 23ರಂದು

ಉಪ್ಪಳ: ಪುತ್ತೂರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವತಿಯಿಂದ ‘ಬಣ್ಣದಜ್ಜನ ಸ್ಮೃತಿಯಾನ’ ಬಣ್ಣದ ಮಹಾಲಿಂಗರ ನೆನಪಿನಲ್ಲೊಂದು ಯಕ್ಷ ಪಯಣ ಈ ತಿಂಗಳ  ಕಾರ್ಯಕ್ರಮ 23ರಂದು ಕುಬಣೂರು ಶ್ರೀರಾಮ ಅನುದಾನಿತ ಹಿರಿಯಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಸಂಸ್ಮರಣೆ, ಯಕ್ಷಸ್ಮೃತಿ, ಸನ್ಮಾನ, ತಾಳಮದ್ದಳೆ ನಡೆಯಲಿದೆ. ಪ್ರಗತಿಪರ ಕೃಷಿಕ ಭಾಸ್ಕರ ರಾವ್ ಉಬರಳೆ ದೀಪ ಪ್ರಜ್ವಲಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ  ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸಂಸ್ಮರಣೆ ನಡೆಸುವರು. ಹಿರಿಯ ಯಕ್ಷಗಾನ ಕಲಾವಿದ ಪರಪ್ಪು ನಾರಾಯಣ ಶೆಟ್ಟಿಯವರಿಗೆ ಬಣ್ಣದ ಮಹಾಲಿಂಗ ಸ್ಮೃತಿ ಸನ್ಮಾನ ನಡೆಯಲಿದೆ. ಯಕ್ಷಗುರು ರಾಮ ಸಾಲ್ಯಾನ್ ಮಂಗಲ್ಪಾಡಿ ಅಭಿನಂದನೆ ಭಾಷಣ ಮಾಡುವರು. ಸುಬ್ರಾಯ ಸಂಪಾಜೆ,  ಸಬ್ಬಪ್ಪ ಪಟ್ಟೆ ತಿಮ್ಮಪ್ಪ ಪುತ್ತೂರು, ರಾಮಚಂದ್ರ ಬಲ್ಲಾಳ್, ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಉಪಸ್ಥಿತರಿರುವರು. ಬಳಿಕ ಯಕ್ಷಕಲಾ ಭಾರತಿ ಪ್ರತಾಪನಗರ ಇವರಿಂದ ‘ಪಾರ್ಥಸಾರಥಿ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.  ಜೂನ್ ತಿಂಗಳ ಕಾರ್ಯಕ್ರಮ ೧ರಂದು ಅಡೂರಿನಲ್ಲಿ ನಡೆಯಲಿದೆ.

You cannot copy contents of this page