ಬದಿಯಡ್ಕದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ . ಆರ್. ಅಂಬೇಡ್ಕರ್‌ರ 134ನೇ ಜನ್ಮದಿನವನ್ನು ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು .ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದÀÄ, ಬದಿಯಡ್ಕ ಪಂಚಾಯತ್ ಅಧ್ಯಕ್ಷೆ ಶಾಂತ ಬಾರಡ್ಕ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಹಾರಾರ್ಪಣೆಗೈಯ್ಯವುದರ ಮೂಲಕ ಉಧ್ಘಾಟಿಸಿದರು. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಂದೀಪ್ ಬದಿಯಡ್ಕ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗಡಿನಾಡ ಗಾಯಕ ವಸಂತ ಬಾರಡ್ಕ, ದಂತ ವೈದ್ಯಕೀಯ ವಿದ್ಯಾರ್ಥಿ ಶಿವಾನಿ ಶಂಕರ್, ಕಾಸರಗೋಡು ಐಟಿಐ ವಿದ್ಯಾರ್ಥಿ ಕೃಷ್ಣ ಕುಮಾರ್, ಜಯಂತ ಬಾರಡ್ಕ ಶುಭ ಹಾರೈಸಿದರು. ನಿರಂಜನ, ನಿಶಿತಾ ಶಂಕರ್, ಗುರು ಪ್ರಸಾದ್ ಉಪಸ್ಥಿತರಿದ್ದರು. ಸುರೇಖ ಬಾರಡ್ಕ ಸ್ವಾಗತಿಸಿ ಜಯರಾಜ್ ಬಾರಡ್ಕ ವಂದಿಸಿದರು.

You cannot copy contents of this page