ಬದಿಯಡ್ಕದಲ್ಲಿ ನಾಳೆ ವಿದ್ಯುತ್ ಮೊಟಕು
ಬದಿಯಡ್ಕ: ಬದಿಯಡ್ಕ ವಿದ್ಯುತ್ ಸೆಕ್ಷನ್‌ನ ಅಧೀನದಲ್ಲಿರುವ ಬದಿಯಡ್ಕ ಪೇಟೆಯಲ್ಲಿ ಹೊಸ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಲಿರುವ ಕಾರಣ ನಾಳೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ವಿವಿಧ ಕಡೆಗಳಲ್ಲಿ ವಿದ್ಯುತ್ ಮೊಟಕುಗೊಳ್ಳಲಿದೆ. ಬದಿಯಡ್ಕ ಮೇಲಿನ ಪೇಟೆ, ತಾಜ್, ಶೆಣೈ ಕಾಂಪ್ಲೆಕ್ಸ್, ಪೆಟ್ರೋಲ್ ಬಂಕ್, ಕ್ಯಾಂಪ್ಕೋ, ಪೇಟೆ ಎಂಬೀ ಟ್ರಾನ್ಸ್‌ಫಾರ್ಮರ್ ವ್ಯಾಪ್ತಿಯಲ್ಲಿ ವಿದ್ಯುತ್ ಮೊಟಕುಗೊಳ್ಳಲಿದೆ ಎಂದು ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.