ಬದಿಯಡ್ಕದಲ್ಲಿ ಬಂಟರ ಸಂಘದ ಆಟಿದ ಕೂಟ, ಸಮ್ಮಿಲನ

ಬದಿಯಡ್ಕ: ಬಂಟರ ಸಂಘದ ನೇತೃತ್ವದಲ್ಲಿ ಆಟಿದ ಕೂಟ, ಬಂಟರ ಸಮ್ಮಿಳನ ಕಾರ್ಯಕ್ರಮ ವಲಮಲೆ ಇರಾ ಸಭಾಭವನದಲ್ಲಿ ಜರಗಿತು. ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಬಂಟರ ಭವನದ ಕಟ್ಟಡ ನಿರ್ಮಾಣ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿ ಮಾತನಾಡಿ, ಬಂಟರು ಈ ಭೂಮಿಯ ಮೂಲ ನಿವಾಸಿಗಳು. ತುಳುನಾಡಿನ ಪ್ರತಿಯೊಂದು ಆಚರ ಣೆಯ ಕಾರಣೀಭೂತರು ಬಂಟ ಸಮಾಜದವರು. ತುಳುನಾಡಿಗೆ ಬಂಟರು ಕೊಟ್ಟ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ ಜಿಲ್ಲಾ ಬಂಟರ ಸಂಘ ಅಧ್ಯಕ್ಷ ಐ ಸುಬ್ಬಯ್ಯ ರೈ ಮಾತನಾಡಿ, ಆಗಸ್ಟ್ 10ರಂದು ಜಿಲ್ಲಾ ಬಂಟರ ಸಂಘದ ಸಹಯೋಗ ದೊಂದಿಗೆ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನೇತೃತ್ವದಲ್ಲಿ ಮಂಗಲ್ಪಾಡಿಯಲ್ಲಿ ನಡೆಯುವ ಜಿಲ್ಲಾ ಬಂಟರ ಸಮ್ಮಿಲನ ಮತ್ತು ಆಟಿದ ಕೂಟ ಕಾರ್ಯಕ್ರಮಕ್ಕೆ ಬದಿಯಡ್ಕ ಪಂ.ನ ಎಲÁ್ಲ ಬಂಟರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದÀÄ ಕರೆ ನೀಡಿದರು. ಜಿಲ್ಲಾ ಬಂಟರ ಸಂ ಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಮಾತೃ ಸಂಘ ಕಾಸರಗೋಡು ತಾಲೂಕು ಸಂಚಾಲಕ ಸುದೀರ್ ಕುಮಾರ್ ರೈ, ಪೆರಡಾಲ ಕ್ಷೇತ್ರದ ಮೊಕ್ತೇಸರ ಪಿ.ಜಿ. ಜಗನ್ನಾಥ ರೈ, ಫಿರ್ಕ ಸಂಘದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಬಂಟರ ಭವನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು ಶುಭ ಹಾರೈಸಿದರು. ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಉಪನ್ಯಾಸ ನೀಡಿದರು. ಆಟಿ ತಿಂಗಳ ತಿಂಡಿ ತಿನಿಸುಗಳ ಪ್ರದರ್ಶನವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಉದ್ಘಾಟಿಸಿದರು.
ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಗೌರಾರ್ಪಣೆ ನಡೆಯಿತು. ರಮನಾಥ ರೈ ಮೇಗಿನ ಕಡಾರು, ಜಗನ್ನಾಥ ರೈ ಕೊರೆಕ್ಕಾನ, ಉದ್ಯಮಿ ಹರಿಪ್ರಸಾದ್ ರೈ ಸ್ಕಂದ, ಇರಾ ಸಭಾ ಭವನದ ಮಾಲಿಕ ಗಂಗಾಧರ ಆಳ್ವ ಪೆರಡಾಲ, ರಾಧಾಕೃಷ್ಣ ರೈ ಕಾಮÁðರು, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಜನಪ್ರತಿನಿಧಿಗಳಾದ ಶುಭ ಲತಾ ರೈ, ಬಾಲಕೃಷ್ಣ ಶೆಟ್ಟಿ ಮೇಗಿನ ಕಡಾರು, ಸುರೇಶ್ ಶೆಟ್ಟಿ, ರವೀಂದ್ರ ನಾಥ ಶೆಟ್ಟಿ ವಲಮಲೆ, ಗಿರೀಶ್ ರೈ ವಳಮಲೆ, ರತೀಶ್ ರೈ ವಲಮಲೆ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು, ಕೋಶಧಿಕಾರಿ ದಯಾನಂದ ರೈ ಮೇಗಿನ ಕಡಾರು ವಂದಿಸಿದರು. ಅಶ್ವಿನಿ ಪ್ರದೀಪ್ ಶೆಟ್ಟಿ ನಿರೂಪಿಸಿದರು. ಶ್ರದ್ಧಾ ರೈ ಪ್ರಾರ್ಥನೆ ಹಾಡಿದರು.

Leave a Reply

Your email address will not be published. Required fields are marked *

You cannot copy content of this page