ಬದಿಯಡ್ಕದಲ್ಲಿ ಬಂಟೆರೆ ಆಟಿದ ಕೂಟ ಆ. 3ರಂದು
ಬದಿಯಡ್ಕ: ಬಂಟರ ಸಂಘ ಬದಿಯಡ್ಕ ಇದರ ಆಶ್ರಯದಲ್ಲಿ ಬಂಟೆರೆ ಆಟಿದ ಕೂಟ ಆಗಸ್ಟ್ 3ರಂದು ಬೆಳಿಗ್ಗೆ 9ರಿಂದ ಇರ ಸಭಾ ಭವನದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು. ಉದ್ಯಮಿ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ಕೆ.ಕೆ. ಶೆಟ್ಟಿ ಕುತ್ತಿಕಾರ್, ನ್ಯಾಯವಾದಿ ಸುಬ್ಬಯ್ಯ ರೈ, ಚಂದ್ರಹಾಸ ರೈ ಪೆರಡಾಲಗುತ್ತು, ಸಂತೋಷ್ ಶೆಟ್ಟಿ ಬಜದಗುತ್ತು ಸಹಿತ ಹಲವರು ಭಾಗವಹಿಸುವರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ಮಾತ ನಾಡುವರು. ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಆಟಿ ತಿಂಗಳ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಲಿದೆ.