ಬದಿಯಡ್ಕದಲ್ಲಿ ಸಂಭ್ರಮದಿಂದ ನಡೆದ ಜಯರಾಮ ಸುವರ್ಣ ಸಂಭ್ರಮ
ಬದಿಯಡ್ಕ: ಯಕ್ಷಗುರು ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮ ನಿನ್ನೆ ಬದಿ ಯಡ್ಕ ಗುರುಸದನದಲ್ಲಿ ಅದ್ಧೂರಿಯಾಗಿ ಜರಗಿದ್ದು, ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮಿ ಶಿವಶಂಕರ ನೆಕ್ರಾಜೆ ಅಧ್ಯಕ್ಷ ವಹಿಸಿದ್ದರು. ಅವರು ಮಾತನಾಡಿ ಯಕ್ಷಗಾನದ ಮುಮ್ಮೇಳ ಮನಸ್ಸಿಗೆ ತೃಪ್ತಿ ನೀಡಿದರೆ ಹಿಮ್ಮೇಳ ಮಾನಸಿಕ ತಳಮಳವನ್ನು ದೂರಗೊಳಿಸುತ್ತದೆ. ಪ್ರೀತಿ, ಭಕ್ತಿ, ಶ್ರದ್ಧೆಯಿಂದ ಮಾಡಿದರೆ ಕಾರ್ಯಕ್ಕೆ ದೇವರ ಅನುಗ್ರಹ ಇರುತ್ತದೆ ಎಂಬುದಕ್ಕೆ ಜಯರಾಮ ಪಾಟಾಳಿ ಪಡುಮಲೆ ಸೂಕ್ತ ಉದಾಹರಣೆಯಾಗಿದ್ದಾರೆಂದು ಅವರು ನುಡಿದರು.
ಉದ್ಯಮಿ ಬಿ. ಗೋಪಾಲಕೃಷ್ಣ ಪೈ ಬದಿಯಡ್ಕ ದೀಪ ಬೆಳಗಿಸಿದರು. ಧಾರ್ಮಿಕ ಮುಖಂಡ ಸುರಾಜ್ ಕಗ್ಗ್ಗೊಡ್ಲು ಮೆಡಿಕೇರಿ ಚಾಲನೆ ನೀಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಗಣಾದಿರಾಜ್ ಉಪಾಧ್ಯಾಯ ಕೊಲ್ಲಂಗಾನ ಶುಭ ಹಾರೈಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಅಭಿನಂದನಾ ಸದಸ್ಯ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ಪಂಚಾಯತ್ ಸದಸ್ಯ ಶ್ಯಾಮ್‌ಪ್ರಸಾದ್ ಮಾನ್ಯ, ಆಯಿಷ ಎ.ಎ. ಪೆರ್ಲ, ಝೆಡ್ ಎ. ಕಯ್ಯಾರು, ಮಾಹಿನ್ ಕೇಳೋಟ್, ಪ್ರಭಾವತಿ ಕೆದಿಲ್ಲಾಯ, ಹರಿನಾರಾಯಣ ಮಾಸ್ತರ್, ಕಲ್ಲಗ ಚಂದ್ರಶೇಖರ್ ರಾವ್, ಗಂಗಾಧರ ಬಲ್ಲಾಳ ಅಡ್ವಳ, ನರೇಂದ್ರ ಬಿ.ಎನ್., ಜಯನಾಂದ ಕುಳ, ಮೊಹಮ್ಮದ್ ಬಡಗನ್ನೂರು, ಪ್ರಸಾದ್ ಟಿ. ಪೆರ್ಲ, ತಾರಾನಾಥ ರೈ, ರವಿ ನಾಯ್ಕಾಪು ಭಾಗವಹಿಸಿದರು.
ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಸುಂದರ, ಜಯ ಮಣಿಯಂಪಾರೆ, ಅಖಿಲೇಶ್ ನಗುಮುಖಂ, ರತ್ನಾಕರ ಎಸ್. ಒಡೆಂಗಲ್ಲು, ಅಶ್ವಿತ್ ಸರಳಾಯ, ಮುಕುಂದರಾಜ್ ಮಲ್ಲ ಉಪಸ್ಥಿತರಿದ್ದರು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.