ಬದಿಯಡ್ಕ ಅಕ್ಷಯಾ ಫ್ಯಾನ್ಸಿ ಮಾಲಕ ನಿಧನ

ಬದಿಯಡ್ಕ: ಬದಿಯಡ್ಕ ಅಕ್ಷಯ ಫ್ಯಾನ್ಸಿಯ ಮಾಲಕರಾದ ಬದಿಯಡ್ಕ ಶಾಂತಿಯಡಿ ಅಕ್ಷಯದ ಶ್ರೀನಿವಾಸ ರಾವ್ (73 ನಿಧನಹೊಂದಿದರು. ಅಲ್ಪ ಕಾಲದಂದ ಇವರಿಗೆ ಅಸೌಖ್ಯ ಬಾಧಿಸಿತ್ತು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೧.೨೦ರ ವೇಳೆ  ನಿಧನ ಸಂಭವಿಸಿದೆ.

ಮೃತರು ಪತ್ನಿ ಪುಷ್ಪಾರಾಜೀವಿ, ಮಕ್ಕಳಾದ ರೋಶನ್ ಕಿರಣ್, ರಚನಾ ಎ.ಎಸ್, ಅಳಿಯ ಡಾ. ಯಶಸ್ ಸೈಪಂಗಲ್ಲು (ಭಾರತೀಯ ಸೇನೆ), ಸೊಸೆ ಅಂಜು, ಸಹೋದರ-ಸಹೋದರಿಯರಾದ ಸಂಜೀವ ರಾವ್, ವಸಂತ ರಾವ್, ಸುಗಂಧಿ, ಜಯಂತಿ, ಸಾವಿತ್ರಿ, ಅರುಣ, ಯಶೋಧ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ಮನೆ ಹಿತ್ತಿಲಲ್ಲಿ ನಡೆಯಿತು.

You cannot copy contents of this page