ಬದಿಯಡ್ಕ ಪೇಟೆಯಲ್ಲಿ ವ್ಯಕ್ತಿ ಕುಸಿದುಬಿದ್ದು ಮೃತ್ಯು
ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ವ್ಯಕ್ತಿಯೊಬ್ಬರು ಬ್ಯಾಂಕ್‌ಗೆ ತೆರಳಿ ಮರಳುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಪೆರಡಾಲ ತೋಟದಮೂಲೆ ಪೆರ್ಮುಖ ನಿವಾಸಿ ಪೆರಿಯ ಗಂಗಾಧರನ್ ನಾಯರ್ (೬೫) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ಬದಿಯಡ್ಕ ಪೇಟೆಯ ಕೆನರಾ ಬ್ಯಾಂಕ್‌ಗೆ ತೆರಳಿದ್ದರು. ಅಲ್ಲಿಂದ ಮರಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿದೆಯೆನ್ನಲಾಗುತ್ತಿದೆ.
ಮೃತರು ಪತ್ನಿ ಪದ್ಮಿನಿ, ಮಕ್ಕಳಾದ ಸಿನಿ, ಶ್ರೀನಾಥ್, ಅಳಿಯ ರತೀಶ್ ಮುನ್ನಾಡ್, ಸಹೋದರ-ಸಹೋದರಿಯರಾದ ಬಾಲಕೃಷ್ಣನ್ ನಾಯರ್, ಮುರಳೀಧರನ್ ನಾಯರ್, ನಳಿನಿ, ಪದ್ಮಿನಿ, ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.