ಬದಿಯಡ್ಕ ಮರ್ಚೆಂಟ್ಸ್, ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್‌ನಿಂದ ಅಭಿನಂದನೆ

ಬದಿಯಡ್ಕ: ವ್ಯಾಪಾರಿ ವ್ಯವ ಸಾಯಿ ಏಕೋಪನಾ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮ ಬದಿಯಡ್ಕ ಮರ್ಚೆಂಟ್ಸ್ ಮತ್ತು ಇಂಡಸ್ಟ್ರಿಯಲಿಸ್ಟ್ ಅಸೋಸಿ ಯೇಶನ್‌ನ ವತಿಯಿಂದ  ಬದಿಯಡ್ಕ ದಲ್ಲಿ ಜರಗಿತು. ಮರ್ಚೆಂಟ್ಸ್ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಅಧ್ಯಕ್ಷತೆ ವಹಿಸಿದರು. ಕಾರ್ಯ ಕ್ರಮವನ್ನು ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಮಾಹಿನ್ ಕೋಳಿಕ್ಕರ, ರೌಫ್, ಸಿಯಾನ್ ಉಸ್ಮಾನ್, ಕುಂಜಾರು ಮೊಹಮ್ಮದ್ ಹಾಜಿ, ದಾಮೋದರನ್, ದಿನೇಶನ್, ಅನ್ವರ್ ಸಾದತ್, ಮುಳ್ಳೇರಿಯ ಘಟಕ ಅಧ್ಯಕ್ಷ ಗಣೇಶ್ ವತ್ಸ, ಪೆರ್ಲ ಘಟಕ ಅಧ್ಯಕ್ಷ ರಾಜಾರಾಂ ಶೆಟ್ಟಿ, ನಾರಂಪಾಡಿ ಘಟಕ ಅಧ್ಯಕ್ಷ ಶ್ರೀಧರನ್, ನೀರ್ಚಾಲು ಘಟಕ ಅಧ್ಯಕ್ಷ ಸುಬ್ರಹ್ಮಣ್ಯ ಎಂ.ರನ್ನು ಅಭಿನಂದಿಸಲಾಯಿತು. ಬದಿಯಡ್ಕ ಘಟಕ ಕಾರ್ಯದರ್ಶಿ ರವಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉದಯ ಶಂಕರ್ ವಂದಿಸಿದರು. ಕೋಶಾಧಿಕಾರಿ ಜ್ಞಾನದೇವ ಶೆಣೈ ನಿರೂಪಿಸಿದರು.

You cannot copy contents of this page