ಬದಿಯಡ್ಕ ಮರ್ಚೆಂಟ್ಸ್ ಹಾಗೂ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಮಹಾಸಭೆ

ಬದಿಯಡ್ಕ: ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿ ಹಾರವನ್ನು ಕಾಣಲು ಸಂಘಟನೆಯಲ್ಲಿ ಎಲ್ಲಾ ಸದಸ್ಯರೂ ಸಕ್ರಿಯರಾಗಬೇಕು. ಸಂಘಟನೆಯ ವತಿಯಿಂದ ನೀಡಲಾ ಗುವ ಎಲ್ಲಾ ಜನಪರಯೋಜನೆಗಳಲ್ಲಿ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಂಡು ಲಭಿಸುವ ಸವಲತ್ತುಗಳನ್ನು ಪಡೆದು ಕೊಳ್ಳಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಕೆ. ಅಹ ಮ್ಮದ್ ಶರೀಫ್ ಅಭಿಪ್ರಾಯಪಟ್ಟರು.
ಬದಿಯಡ್ಕ ಮರ್ಚೆಂಟ್ಸ್ ಹಾಗೂ ಇಂಡಸ್ಟಿçಯಲಿಸ್ಟ್ ಅಸೋಸಿಯೇಶನ್ ಬದಿಯಡ್ಕ ಇದರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದಿಯಡ್ಕ ಸರಕಾರಿ ಆಸ್ಪತ್ರೆಯ ಸಮೀ ಪದ ಮನುಕುಲ ಅಪಾರ್ಟ್ ಮೆಂಟ್‌ನಲ್ಲಿ ಜರಗಿದ ಮಹಾಸಭೆ ಯಲ್ಲಿ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್. ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹಮೀದ್ ಬರಾಕಾ ವಾರ್ಷಿಕ ವರದಿ ಹಾಗೂ ಕೋಶಾದಿsಕಾರಿ ಜ್ಞಾನದೇವ ಶೆಣೈ ಲೆಕ್ಕಪತ್ರ ಮಂಡಿಸಿದರು. ನೂತನ ಸದಸ್ಯರಿಗೆ ಜಿಲ್ಲಾ ಕಾರ್ಯದರ್ಶಿ ದಿನೇಶ್ ಸದಸ್ಯತನ ಕಾರ್ಡ್ ಹಸ್ತಾಂ ತರಿಸಿದರು. ಮೃತರಾದ ಸದಸ್ಯರ ಮನೆಯವರಿಗೆ ನೀಡಲಾಗುವ ಜಿಲ್ಲಾ ಸಮಿತಿಯ ಧನಸಹಾಯವನ್ನು ಜಿಲ್ಲಾ ಕಾರ್ಯದರ್ಶಿ ಕೆ.ವಿ. ದಾಮೋದರನ್ ಫಲಾನುಭವಿಗಳಿಗೆ ನೀಡಿದರು. ಹಿರಿಯ ವ್ಯಾಪಾರಿಗಳನ್ನು ಗೌರವಿಸ ಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊAದಿಗೆ ಉತ್ತೀರ್ಣರಾದ ವ್ಯಾಪಾರಿ ಸದಸ್ಯರ ಹಾಗೂ ವ್ಯಾಪಾರಿ ಸಂಸ್ಥೆಗಳಲ್ಲಿ ದುಡಿಯುವವರ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದ ನವೀನ್ ಪೈ ಬದಿಯಡ್ಕ, ಸಾಧಕ ಸದಸ್ಯ ರತ್ನಾಕರ ಎಸ್.ಓಡಂಗಲು,್ಲ ಅಖಿಲೇಶ್ ನಗು ಮುಗಂ ಇವರನ್ನು ಸನ್ಮಾನಿಸಲಾ ಯಿತು. ಬದಿಯಡ್ಕ ಸರಕಾರಿ ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ ಎಲ್‌ಇಡಿ ಬಲ್ಬ್ಗಳನ್ನು ಘಟಕದ ಎಲ್ಲಾ ಸದಸ್ಯರಿಗೂ ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮುಹ ಮ್ಮದ್ ಕುಂಞÂ ಹಾಜಿ, ಎಸ್.ಎನ್. ಮಯ್ಯ, ಉಪಾಧ್ಯಕ್ಷ ರಾಜುಸ್ಟೀಫನ್ ಕ್ರಾಸ್ತ, ಕಾರ್ಯದರ್ಶಿ ವಿಶ್ವನಾಥನ್, ವನಿತಾವಿಂಗ್ ಪ್ರಮುಖರಾದ ಜಯಂತಿ ಚೆಟ್ಟಿಯಾರ್, ಕೃಪಾ ಯತೀಶ್, ಯೂತ್ ವಿಂಗ್ ಪ್ರಮುಖ ರಾದ ಸುಬ್ರಹ್ಮಣ್ಯ ಪೈ, ಶಾಹಿದ್ ಉಪಸ್ಥಿತರಿದ್ದರು. ಯೂನಿಟ್ ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿ, ಉದಯ ಶಂಕರ ವಂದಿಸಿದರು.

RELATED NEWS

You cannot copy contents of this page