ಬದಿಯಡ್ಕ ಶಬರಿಗಿರಿಯಲ್ಲಿ ಶ್ರೀರಾಮ ದೀಪೋತ್ಸವ

ಬದಿಯಡ್ಕ: ಬದಿಯಡ್ಕ ಶಬರಿ ಗಿರಿಯಲ್ಲಿ ನೂತನವಾಗಿ ನಿರ್ಮಾಣ ಗೊಳ್ಳಲಿರುವ ಶ್ರೀ ಅಯ್ಯಪ್ಪ ಮಂದಿರ ದಲ್ಲಿ ಅಯ್ಯಪ್ಪ ಸೇವಾಟ್ರಸ್ಟ್, ಶಬರಿಗಿರಿ ಮಹಿಳಾ ಸಮಿತಿ, ಶ್ರೀರಾಮ ಭಕ್ತವೃಂದ ಇವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನ ಸಂಜೆ ದೀಪೋತ್ಸವ, ಭಜನೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ಮಾಸ್ಟರ್ ಧಾರ್ಮಿಕ ಭಾಷಣ ಮಾಡಿದರು. ಕರಸೇವೆಯಲ್ಲಿ ಪಾಲ್ಗೊಂಡ 15 ಮಂದಿಯನ್ನು ಗೌರವಿಸಲಾಯಿತು. ನಿದಿs ಕೂಪನ್ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಯ್ಯಪ್ಪ ಸೇವಾ ಟ್ರಸ್ಟ್ನ ಅಧ್ಯಕ್ಷ ನರೇಂದ್ರ ಬಿ.ಎನ್. ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಪೈ ವಂದಿಸಿದರು. ಕೋಶಾದಿsಕಾರಿ ಗುರುಪ್ರಸಾದ ರೈ ನಿರೂಪಿಸಿದರು.

You cannot copy contents of this page