ಬದಿಯಡ್ಕ, ಹೊಸದುರ್ಗದಲ್ಲಿ ಪೋಕ್ಸೋ ಕೇಸು : ಇಬ್ಬರ ಸೆರೆ

ಕಾಸರಗೋಡು: ಬದಿಯಡ್ಕ  ಹಾಗೂ ಹೊಸದುರ್ಗ ಪೊಲೀಸ್ ಠಾಣೆಗಳಲ್ಲಿ ಎರಡು ಪೋಕ್ಸೋ ಕೇಸುಗಳನ್ನು  ದಾಖಲಿಸಿಕೊಳ್ಳಲಾ ಗಿದೆ.  ಈ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.ಶೇಣಿ ಮಣಿಯಂಪಾರೆಯ  ಸವಾದ್ (26) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿ ದ್ದಾರೆ. ಪ್ಲಸ್‌ವನ್ ವಿದ್ಯಾರ್ಥಿಯಾದ 13ರ ಹರೆಯದ ಬಾಲಕನನ್ನು ಬೈಕ್‌ನಲ್ಲಿ ಕರೆದೊಯ್ದು ಎರಡು ಬಾರಿ ಕಿರುಕುಳ ನೀಡಿರುವುದಾಗಿ ಲಭಿಸಿದ ದೂರಿನಂತೆ  ಪೋಕ್ಸೋ ಕೇಸು ದಾಖ ಲಿಸಿ ಆರೋಪಿಯನ್ನು ಬಂಧಿಸಲಾ ಗಿzಯೆಂದು ಪೊಲೀಸರು ತಿಳಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ   ಬಾಲಕಿಯ ಎರಡನೇ ತಂದೆಯಾದ 45ರ ಹರೆಯದ  ವ್ಯಕ್ತಿಯನ್ನು  ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಮೊದಲ ಪತ್ನಿಯ 9ರ ಹರೆಯದ  ಪುತ್ರಿಗೆ ಕಿರುಕುಳ ನೀಡಿದ ಆರೋಪದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ ೧ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಮೊದಲ ಬಾರಿ ಕಿರುಕುಳ ನಡೆದಿದೆ. ಭಯದಿಂದ ಬಾಲಕಿ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಮತ್ತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬಾಲಕಿ ವಿಷಯವನ್ನು ಬಹಿರಂಗಪಡಿಸಿದ್ದಾಳೆ.  ಈ ಹಿನ್ನೆಲೆ ಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page