ಬಪ್ಪನಾಡು ಕ್ಷೇತ್ರ ರಥೋತ್ಸವ ವೇಳೆ ಮುರಿದು ಬಿದ್ದ ಬ್ರಹ್ಮರಥ
ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವ ವೇಳೆ ರಥ ಮುರಿದು ಬಿದ್ದ ದುರ್ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ವಾರ್ಷಿಕ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಭಾಗ ಮುರಿದು ಬಿದ್ದಿದೆ.
ಈ ವೇಳೆ ಕ್ಷೇತ್ರದಲ್ಲಿ ಭಾರೀ ಭಕ್ತರು ನೆರೆದಿದ್ದರು. ಅರ್ಚಕರು ರಥದಲ್ಲಿ ಕುಳಿತಿದ್ದರೂ ಕೂಡಾ ಯಾರಿಗೂ ಯಾವುದೇ ಹಾನಿ ಸಂಭವಿಸಲಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ಉತ್ಸವದ ವಿಧಿ ವಿಧಾನಗಳನ್ನು ಮುಂದುವರಿಸಲಾಗಿದೆ.