ಬಳಾಲ್‌ನಲ್ಲಿ ಕಾರು ಮಗುಚಿದಾಗ ರಕ್ಷಿಸಲು ತಲುಪಿದ ಪೊಲೀಸ್ ತಂಡಕ್ಕೆ ಆಕ್ರಮಿಸಿದ ಯುವಕ ಸೆರೆ
ಹೊಸದುರ್ಗ: ಚರಂಡಿಗೆ ಮಗುಚಿದ ಕಾರಿನ ಪ್ರಯಾಣಿಕನನ್ನು ರಕ್ಷಿಸಲೆಂದು ತಲುಪಿದ ಪೊಲೀಸ್ ತಂಡವನ್ನು ಆಕ್ರಮಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಬಳಾಲ್ ಮಂಗಯ ನಡುತ್ತೋಡಿ ಹೌಸ್ ನಿವಾಸಿ ಅರ್ಜುನ್ ತಿಲಕ್ (30)ನನ್ನು ವೆಳ್ಳರಿಕುಂಡ್ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 1.10ರ ವೇಳೆ ಘಟನೆ ನಡೆದಿದೆ. ಈತ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮಂಗಯದಲ್ಲಿ ರಸ್ತೆ ಬದಿಯ ಚರಂಡಿಗೆ ಬಿದ್ದು ಅಪಘಾತ ಸಂಭವಿಸಿತ್ತು.
ಈ ಮಧ್ಯೆ ಎಎಸ್‌ಐಟಿ ಮಧುರ ವರ ನೇತೃತ್ವದಲ್ಲಿ ನೈಟ್ ಪಟ್ರೋ ಲಿಂಗ್ ನಡೆಸುತ್ತಿದ್ದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು. ಕಾರಿನೊಳಗಿದ್ದ ವ್ಯಕ್ತಿ ಮದ್ಯದಮಲಿ ನಲ್ಲಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಪೊಲೀಸರ ನಿರ್ದೇಶವನ್ನು ಆ ವ್ಯಕ್ತಿ ಅನುಸರಿಸಿಲ್ಲವೆಂದು ಹೇಳ ಲಾಗಿದೆ. ಈ ಮಾಹಿತಿಯನ್ನು ಪೊಲೀಸರು ಇನ್ಸ್‌ಪೆಕ್ಟರ್ ಕೆ.ಪಿ. ಸತೀಶ್‌ರಿಗೆ ತಿಳಿಸಿದರು. ಬಳಿಕ ಇನ್ಸ್ ಪೆಕ್ಟರ್ ಹಾಗೂ ಚಾಲಕ ರಂಜಿತ್ ರಾಜೀವ್ ಸ್ಥಳಕ್ಕೆ ತಲುಪಿದರು.
ಅರ್ಜುನ್ ತಿಲಕ್‌ನಲ್ಲಿ ಕಾರಿನಿಂದ ಹೊರಗಿಳಿಯಲು ಇನ್ಸ್‌ಪೆಕ್ಟರ್ ಹೇಳಿದರಾದರೂ ಆತ ಒಪ್ಪಲಿಲ್ಲ. ಒತ್ತಾಯಪಡಿಸಿದಾಗ ಹೊರಗೆ ಬಂದು ಇನ್ಸ್‌ಪೆಕ್ಟರ್‌ರನ್ನು ಕೀಲಿಕೈಯಿಂದ ಚುಚ್ಚಿ ಗಾಯ ಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಎಎಸ್‌ಐ ಮಧು ಹಾಗೂ ಚಾಲಕ ರಂಜಿತ್‌ರಾಜ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುರೇಶ್‌ರಿಗೂ ಗಾಯ ಉಂಟಾಗಿದೆ. ಆರೋಪಿ ಯನ್ನು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಿದ ಬಳಿಕ ಗಾಯಗೊಂಡ ಇನ್ಸ್‌ಪೆಕ್ಟರ್ ಹಾಗೂ ಪೊಲೀಸರು ಪುಡಂಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.