ಬಸ್‌ಗಾಗಿ ಕಾಯುತ್ತಿದ್ದ ಯುವತಿಗೆ ಹಂದಿ ತಿವಿತ

ಮುಳ್ಳೇರಿಯ: ಪತಿ ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಯುವತಿಗೆ ಹಂದಿ ತಿವಿದು ಗಾಯಗೊಂಡಿದ್ದಾರೆ. ನಿನ್ನೆ ಅಪರಾಹ್ನ ಆದೂರು ಬಳಿ ಘಟನೆ ನಡೆದಿದೆ. ಬೆಳ್ಳೂರಡ್ಕ ನಿವಾಸಿ ಮಾಲತಿ (೨೯) ಎಂಬವರಿಗೆ ಹಂದಿ ತಿವಿದಿದ್ದು, ಈ ವೇಳೆ ನೆಲಕ್ಕೆ ಬಿದ್ದ ಮಾಲತಿಯವರ ನಾಲ್ಕು ಹಲ್ಲು ಉದುರಿದೆ. ಕೆಳಗಿನ ನಾಲ್ಕು ಹಲ್ಲುಗಳು ಅಲುಗಾಡುತ್ತಿದ್ದು, ಇವರನ್ನು ಕೂಡಲೇ ಸ್ಥಳೀಯರು ಚೆಂಗಳ ಇ.ಕೆ. ನಾಯನ್ನಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎನ್.ಎ. ನೆಲ್ಲಿಕುನ್ನು ಸರಕಾರದ ಅನಾಸ್ಥೆಗೆ ಇದು ಮತ್ತೊಂದು ಉದಾಹರಣೆ ಎಂದು ತಿಳಿಸಿದ್ದಾರೆ. ಗಾಯಗೊಂಡ ಮಾಲತಿಗೆ ಸರಕಾರ ನಷ್ಟ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಹಗಲು ರಾತ್ರಿ ವ್ಯತ್ಯಾಸವಿಲ್ಲದೆ ಕಾಡುಪ್ರಾಣಿಗಳು ಮನುಷ್ಯರಿಗೆ ಉಪಟಳ ನೀಡುತ್ತಿದ್ದರೂ ಅಪಾಯ ಸಂಭವಿಸಬಹುದಾದ ವಲಯಗಳಲ್ಲಿ ಸುರಕ್ಷಾ ವ್ಯವಸ್ಥೆ ಕೈಗೊಳ್ಳದಿ ರುವುದು ಖಂಡನೀಯವೆಂದು ಶಾಸಕರು ತಿಳಿಸಿದ್ದಾರೆ.

You cannot copy contents of this page