ಬಸ್‌ನಲ್ಲಿ ಸಾಗಿಸುತ್ತಿದ್ದ ಐದೂವರೆ ಕಿಲೋ ಗಾಂಜಾ ವಶ: ಇಬ್ಬರ ಸೆರೆ
ಕಣ್ಣೂರು: ಬಸ್‌ನಲ್ಲಿ ಸಾಗಿಸು ತ್ತಿದ್ದ ಐದೂವರೆ ಕಿಲೋ ಗಾಂಜಾ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಉತ್ತರಪ್ರದೇಶ ನಿವಾಸಿಗಳಾದ ಸುಶೀರ್ ಕುಮಾರ್ ಗಿರಿ (36), ರಾಮ್‌ರತನ್ ಸಾಹ್‌ನಿ (40) ಎಂಬಿವರನ್ನು ವಳಪಟ್ಟಣಂ ಪೊಲೀ ಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಳಿಪರಂಬದಿಂದ ತಲಶ್ಶೇರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಇವರು ಪ್ರಯಾಣಿಸುತ್ತಿದ್ದರು. ಪಾಪಿನಿಶ್ಶೇರಿ ಚುಂಗ ಎಂಬಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ. ವಳಪಟ್ಟಣಂ ಎಸ್‌ಎಚ್‌ಒ ಬಿ. ಕಾರ್ತಿಕ್, ಇನ್‌ಸ್ಪೆಕ್ಟರ್ ಟಿ.ಪಿ.ಸುಮೇಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.