ಬಸ್ನ ಹಿಂದೆ ಬೈಕ್ ಢಿಕ್ಕಿ ಗಾಯಗೊಂಡ ವಿದ್ಯಾರ್ಥಿ ಮೃತ್ಯು
ಕಾಸರಗೋಡು: ಬಟ್ಟತ್ತೂರು ಪೊಯಿನಾಚಿಯಲ್ಲಿ ನಿಲ್ಲಿಸಿದ್ದ ಬಸ್ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿ ಮೃತಪಟ್ಟನು. ಕುಣಿಯದ ಕೆ.ವಿ. ಅಬ್ದುಲ್ಲರ ಪುತ್ರ ಅಬ್ದುಲ್ ರಹ್ಮಾನ್ ಫಾಯಿಸ್ (19) ಮೃತಪಟ್ಟ ವಿದ್ಯಾರ್ಥಿ. ಎಸ್ಎಸ್ಎಫ್ ಮಾಜಿ ಕುಣಿಯ ಯೂನಿಟ್ ಕಾರ್ಯದರ್ಶಿಯಾದ ಫಾಯಿಸ್ ಮಂಗಳೂರಿನ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಬಟ್ಟತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡ ಫಾಯಿಸ್ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.