ಬಸ್ಸಿನಲ್ಲಿ ಯುವತಿ ಮುಂದೆ ನಗ್ನತೆ ಪ್ರದರ್ಶಿಸಿದ ಯುವಕ
ಕಾಸರಗೋಡು: ಸಂಚರಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಯುವಕ ನೋರ್ವ ನಗ್ನತಾ ಪ್ರದರ್ಶನ ನಡೆಸಿ ಇನ್ನೇನು ಸಿಕ್ಕಿ ಬೀಳುವಷ್ಟರಲ್ಲಿ ಆತ ಬಸ್ಸಿನಿಂದ ಇಳಿದು ಪರಾರಿಯಾದ ಘಟನೆ ನಡೆದಿದೆ.
ಯುವತಿಯೋರ್ವೆ ನಿನ್ನೆ ಮಧ್ಯಾ ಹ್ನ ತನ್ನ ಆರು ವರ್ಷದ ಮಗಳೊಂದಿಗೆ ಬಸ್ಸಿನಲ್ಲಿ ಹೊಸದು ರ್ಗದಿಂದ ಬೇಕಲಕ್ಕೆ ಪ್ರಯಾಣಿಸು ತ್ತಿದ್ದಳು. ಆಗ ಆ ಬಸ್ಸಿನಲ್ಲಿ ಕೆಲವೇ ಪ್ರಯಾಣಿಕರಿ ದ್ದರು. ಈ ಸಂದರ್ಭ ದಲ್ಲಿ ಅದೇ ಬಸ್ಸಿ ನಲ್ಲಿ ಆ ಯುವತಿ ಕುಳಿತಿದ್ದ ಆಸನದ ಎದುರುಗಡೆ ಆಸನದಲ್ಲಿ ಕುಳಿತಿದ್ದ ಯುವಕ ಅಲ್ಲಿಂದಲೇ ನಗ್ನತಾ ಪ್ರದರ್ಶನ ನಡೆಸಿದ್ದಾನೆ. ಅದನ್ನು ಗಮನಿಸಿದ ಯುವತಿ ಆ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಕಂಡಕ್ಟ ರ್ರ ಗಮನಕ್ಕೆ ತರಲೆತ್ನಿಸಿದ್ದಾಳೆ. ಅದನ್ನು ಕಂಡ ಯುವಕ ತಾನು ಸಿಕ್ಕಿ ಬೀಳುವ ಸಾಧ್ಯತೆ ಇದೆಯೆಂದು ತಿಳಿದು ತಕ್ಷಣ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡ ಲಾಗಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗ್ನತಾ ಪ್ರದರ್ಶನ ನಡೆಸಿದ ದೃಶ್ಯವೂ ಪೊಲೀಸರಿಗೆ ಲಭಿಸಿದ್ದು ಆದರೆ ಆ ಜಾಡು ಹಿಡಿದು ಯುವಕನ ಪತ್ತೆಗಾ ಗಿರುವ ಶೋಧ ಕಾರ್ಯಾ ಚರಣೆಯನ್ನು ಪೊಲೀಸರು ತೀವ್ರಗೊ ಳಿಸಿದ್ದಾರೆ.