ಬಸ್-ಟಾಟಾ ಸುಮೋ ಢಿಕ್ಕಿ ಹೊಡೆದು ೭ ಸಾವು: ಹಲವರಿಗೆ ಗಾಯ
ಚೆನ್ನೈ: ತಮಿಳು ನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ತಮಿಳು ನಾಡು ಸರಕಾರಿ ಬಸ್ ಹಾಗೂ ಟಾಟಾ ಸುಮೋ ವಾಹನ ಮುಖಾಮುಖಿ ಢಿಕ್ಕಿಯಾದ ಪರಿಣಾಮ ೭ ಮಂದಿ ಸಾವನ್ನಪ್ಪಿ, ೧೪ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಈ ಘಟನೆ ನಡೆದಿದೆ. ಬಸ್ ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿತ್ತು. ಅದು ಕರುಮಂಕುಲಂಗೆ ತಲುಪಿದಾಗ ಎರಡು ಕಡೆಯಿಂದ ಟಾಟಾ ಸುಮೋದೊಂದಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಪೊಲೀಸರು ತಕ್ಷಣ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಆರು ಮಂದಿ ಅಸ್ಸಾಂನಿಂದ ಬಂದ ವಲಸೆ ಕಾರ್ಮಿಕರಾಗಿದ್ದಾರೆ. ಓರ್ವ ತಮಿಳುನಾಡು ನಿವಾಸಿ ಯಾಗಿದ್ದಾರೆ.