ಬಸ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು
ಕಾಸರಗೋಡು: ಬಸ್ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಸೌತ್ ತೃಕರಿಪುರದ ಇಳಂಬಚ್ಚಿ ವಡಕ ಮನಯಿನ ಕೆ.ಎಂ. ಕುಂಞಿಕೃಷ್ಣನ್ (44) ಅಪಘಾ ತದಲ್ಲಿ ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ಕರೋಳಂ ಬಸ್ ತಂಗುದಾಣ ಬಳಿ ನಡೆದು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ನಿವೃತ್ತ ಅಧ್ಯಾಪಕ ದಿ| ಸಿ.ಟಿ. ಕೃಷ್ಣನ್ ನಂಬ್ಯಾರ್-ಕೆ.ಎಂ. ಗೌರಿ ದಂಪತಿ ಪುತ್ರನಾಗಿರುವ ಮೃತ ಕುಂಞಿಕೃಷ್ಣನ್ ಸಹೋದರ-ಸಹೋದರಿಯರಾದ ಕೆ.ಎಂ. ಮುರಳೀಧರನ್, ರಾಮದಾಸ್, ಜಯಕೃಷ್ಣನ್ ಮತ್ತು ಮೃದುಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.