ಬಸ್ ನೌಕರನ ಸ್ಕೂಟರ್ ಕಳವು

ಬದಿಯಡ್ಕ: ಬಸ್ ನೌಕರ ರೊಬ್ಬರ ಸ್ಕೂಟರ್ ಕಳವಿಗೀಡಾದ ಘಟನೆ ನಡೆದಿದೆ. ಬೆಳ್ಳಿಗೆ ಬಳಿಯ ವಳಕಲ ಎಂಬಲ್ಲಿನ ವಿಜಿತ್ ವಿ ಎಂಬವರ ಸ್ಕೂಟರ್ ಕಳವಿಗೀಡಾ ಗಿದೆ. ಈ ತಿಂಗಳ ೧೭ರಂದು ರಾತ್ರಿ ೮.೩೦ರಿಂದ ೧೮ರಂದು ಬೆಳಿಗ್ಗೆ ೬ ಗಂಟೆ ಮಧ್ಯೆ ಸ್ಕೂಟರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮನೆ ಸಮೀಪದ ರಸ್ತೆ ಬದಿ ಸ್ಕೂಟರ್ ನಿಲ್ಲಿಸಲಾಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆಂದು  ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಜಿತ್‌ರ ಮನೆ ಸಮೀಪದ ಸಿಸಿ ಕ್ಯಾಮರಾವನ್ನು  ಪೊಲೀಸರು ಪರಿಶೀ ಲಿಸಿದ್ದು, ಅದರಲ್ಲಿ ವ್ಯಕ್ತಿಯೋರ್ವರ ಸ್ಕೂಟರ್ ಕೊಂಡೊಯ್ಯುವ ದೃಶ್ಯ ಪತ್ತೆಯಾಗಿ ದೆಯೆಂದು ತಿಳಿಸಲಾಗಿದೆ.

You cannot copy contents of this page