ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿಯ ಸೆರೆ

ಕಾಸರಗೋಡು: ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಲು ಪ್ರಯತ್ನಿಸಿದ ವ್ಯಕ್ತಿಯನ್ನು ಇತರ ಪ್ರಯಾಣಿಕರು ಹಾಗೂ ನೌಕರರು ಸೇರಿ ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಯಾಣಿಕೆಯ ಹೇಳಿಕೆ ದಾಖಲಿಸಿಕೊಂಡ ಬಳಿಕ ವ್ಯಕ್ತಿಯನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ನಿವಾಸಿಯಾದ ನಾಸರ್ (53) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ನಾಸರ್ ಬಿಗಿದಪ್ಪಲು ಪ್ರಯತ್ನಿಸಿದ್ದನೆನ್ನ ಲಾಗಿದೆ. ಈ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಹಾಗೂ ನೌಕರರು ಸೇರಿ ನಾಸರ್‌ನನ್ನು ಕೈಯ್ಯಾರೆ ಸೆರೆ ಹಿಡಿದಿದ್ದಾರೆ. ವಿಷಯ ತಿಳಿದು ಪೊಲೀಸರು ತಲುಪಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆತನನ್ನು ಠಾಣೆಗೆ ತಲುಪಿಸಿ ತನಿಖೆ ಗೊಳಪಡಿಸಿದಾಗಲೇ ಆಲಪ್ಪುಳ ನಿವಾಸಿಯಾಗಿದ್ದಾನೆಂದು ತಿಳಿದು ಬಂ ದಿದೆ. ವಿವಿಧೆಡೆ ಸುತ್ತಾಡುವ ಸ್ವಭಾವ ಹೊಂದಿರುವ ಈತ ಇತ್ತೀಚೆಗಷ್ಟೇ ಕಾಸರಗೋಡಿಗೆ ತಲುಪಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಸ್ಥಿತಿ ಮತ್ತಷ್ಟು ಗಂಭೀರವಾಗಿ ಮುಂದುವರಿದ ಹಿನ್ನೆಲೆಯಲ್ಲಿ ವೈದ್ಯರ ನಿರ್ದೇಶ ಪ್ರಕಾರ ವಯನಾಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ  ಸಾವು ಸಂಭವಿಸಿದೆ.

You cannot copy contents of this page