ಬಾಂಬು ಎಂದು ಹೆದರಿ ಎಸೆದ ಪಾತ್ರೆಯಲ್ಲಿ ಸಿಕ್ಕಿದ್ದು ಭಾರೀ ನಿಧಿ
ಕಾಸರಗೋಡು: ಹಿತ್ತಿಲಲ್ಲಿ ಕಂಡ ವಸ್ತು ಬಾಂಬ್ ಆಗಿರಬಹುದೆಂದು ಹೆದರಿ ಅದನ್ನು ದೂರ ಎಸೆದಾಗ ಅದರಲ್ಲಿ ಸಿಕ್ಕಿದ್ದು ಅಪಾರ ನಿಧಿ.
ಬಾಂಬ್ ನಿರ್ಮಾಣ ಪ್ರದೇಶ ವೆಂದೇ ಕುಖ್ಯಾತಿ ಪಡೆದಿರುವ ಕಣ್ಣೂರು ಜಿಲ್ಲೆಯ ಶ್ರೀಕಂಠಾಪು ರದಲ್ಲಿ ಈ ಘಟನೆ ನಡೆದಿದೆ.
ಶ್ರೀಕಂಠಾಪುರಕ್ಕೆ ಸಮೀಪದ ಚೆಂಗಳಾಯಿ ಪಂಚಾಯತ್‌ನ ಪರಿಪ್ಪಾಯಿ ಸರಕಾರಿ ಎಲ್‌ಪಿ ಶಾಲೆ ಸಮೀಪದ ಖಾಸಗಿ ಹಿತ್ತಿಲಲ್ಲಿ ಈ ನಿಧಿ ಪತ್ತೆಯಾಗಿದೆ. ಈ ಹಿತ್ತಿಲಲ್ಲಿ ಪೊದೆಗಳು ಕಾಡುಗಳಂತೆ ಬೆಳೆದಿತ್ತು. ಅದನ್ನು ಶುಚೀಕರಿಸಲೆಂದು ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರನ್ನು ಕರೆಸಲಾಗಿತ್ತು. ಅವರು ಪೊದೆಗಳನ್ನು ಕಡಿಯುತ್ತಿ ರುವಂತೆಯೇ ಅಲ್ಲಿ ಭದ್ರವಾದ ರೀತಿಯಲ್ಲಿ ಮುಚ್ಚಲಾಗಿದ್ದ ಪಾತ್ರೆಯೊಂದು ಕಂಡುಬಂದಿದೆ. ಅದನ್ನು ಕಂಡು ಉದ್ಯೋಗ ಖಾತರಿ ಕಾರ್ಮಿಕರು ಅದು ಬಾಂಬ್ ಆಗಿರಬಹುದೆಂದು ಭಾವಿಸಿ ಹೆದರಿ ಅದನ್ನು ಅಲ್ಲಿಂದ ಎತ್ತಿ ದೂರ ಎಸೆದಿದ್ದಾರೆ. ಆಗ ಆ ಪಾತ್ರೆ ಅಲ್ಲೇ ಬಾಯಿ ತೆರೆದು ಬಿದ್ದಾಗ ಅದರಲ್ಲಿ ಅಚ್ಚರಿ ಎಂಬಂತೆ ಭಾರೀ ನಿಧಿ ಪತ್ತೆಯಾಗಿದೆ. ಇದರಿಂದ ಆಶ್ಚರ್ಯಗೊಂಡ ಕಾರ್ಮಿಕರು ಕೂಡಲೇ ಪಂಚಾಯತ್ ಅಧಿಕಾರಿಗಳನ್ನು ಕರೆದು ಮಾಹಿತಿ ನೀಡಿದ್ದಾರೆ. ಪಂಚಾಯತ್ ಅಧಿಕಾರಿ ಗಳು ತಕ್ಷಣ ಪೊಲೀಸರೊಂದಿಗೆ ಸಳಕ್ಕೆ ಬಂದು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿದೆ. ನಂತರ ಪೊಲೀಸರು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಒಯ್ದರು. ಬಳಿಕ ಅದನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ತೆಯಾದ ನಿಧಿಯಲ್ಲಿ 3 ಚಿನ್ನದ ಲಾಕೆಟ್‌ಗಳು, 17 ಮುತ್ತುಗಳು, ನಾಲ್ಕು ಚಿನ್ನದ ಪದಕಗಳು, 5 ಉಂಗುರಗಳು, ಬೆಳ್ಳಿ ನಾಣ್ಯಗಳು ಒಳಗೊಂಡಿವೆ.
ಈ ನಿಧಿಯಲ್ಲಿ ಪತ್ತೆಯಾದ ನಾಣ್ಯಗಳಲ್ಲಿ ಅದನ್ನು ತಯಾರಿಸಿದ ವರ್ಷ ದಾಖಲುಪಡಿಸಲಾಗಿಲ್ಲ. ಆದ್ದರಿಂದ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವಷ್ಟೇ ಅದರ ಪುರಾತನತೆ ತಿಳಿಯಲು ಸಾಧ್ಯ ವೆಂದು ಪ್ರಾಚ್ಯ ವಸ್ತು ನಿರ್ದೇಶಕ ಇ. ದಿನೇಶನ್ ತಿಳಿಸಿದ್ದಾರೆ.
ಇದು ಯಾವುದೋ ದೇವಸ್ಥಾನ ಅಥವಾ ಪುರಾತನ ಮನೆತನಕ್ಕೆ ಸೇರಿದ ನಿಧಿಯಾಗಿರಬಹದೆಂದೂ, ಕಳ್ಳರ ಭಯದಿಂದ ಅದನ್ನು ಮಣ್ಣಿನಲ್ಲಿ ಹೂತಿಟ್ಟಿರಬಹುದೆಂದು ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ.
ಕಣ್ಣೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಕ್ರಮ ಬಾಂಬ್ ನಿರ್ಮಿಸುವ ಕೇಂದ್ರಗಳೂ ಇವೆ. ಆದ್ದರಿಂದಲೇ ಉದ್ಯೋಗ ಕಾರ್ಮಿ ಕರು ಆ ನಿಧಿ ಒಳಗೊಂಡ ಪಾತ್ರವನ್ನು ಕಂಡಾಕ್ಷಣ ಬಾಂಬ್ ಆಗಿರಬಹುದೆಂದು ದೂರ ಎಸೆದಿದ್ದಾರೆ.