ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ
ಕಣ್ಣೂರು: ಸ್ಪಾ ಕೇಂದ್ರ ಆರಂಭಿಸುವ ಹೆಸರಲ್ಲಿ ವಡಗರ ಎಡೋಟಿಯಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗಿದೆ. ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಯುವತಿ, ಯುವಕರನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರು, ತೃಶೂರು ನಿವಾಸಿಗಳಾದ ಯುವತಿಯರು ಹಾಗೂ ಕೂತುಪರಂಬ್ ನಿವಾಸಿಯಾದ ಉಣ್ಣಿ ಹಾಗೂ ಕಲ್ಲಿಕೋಟೆ, ತೃಶೂರು ನಿವಾಸಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.