ಬಾಯಿಕಟ್ಟೆಯಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ ವ್ಯಕ್ತಿತ್ವ ವಿಕಸನ ಶಿಬಿರ
ಪೈವಳಿಕೆ: ವಿಶ್ವಕರ್ಮ ಸಮಾಜ ಸೇವಾ ಸಂಘ ಬಾಯಾರು ಮತ್ತು ಶ್ರೀ ಕಾಳಿಕಾಂಬ ಸೇವಾ ಸಮಿತಿ ಬಾಯಿಕಟ್ಟೆ ಪೈವಳಿಕೆ ಇದರ ಜಂಟಿ ಆಶ್ರಯದಲ್ಲಿ ಐದನೇ ತರಗತಿಯಿಂದ ಮೇಲ್ಪಟ್ಟು ಕಲಿಯುತ್ತಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿ ಯರಿಗಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಕಾ ರದಿಂದ ಎರಡು ದಿನದ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ ಇತ್ತೀಚೆಗೆ ಪೈವಳಿಕೆ ತರವಾಡು ಮನೆ ಬಾಯಿಕಟ್ಟೆ ಯಲ್ಲಿ ಜರಗಿತು. ಬಾಯಾರು ಪ್ರಾಂತ್ಯ ಅಧ್ಯಕ್ಷ ಎಂ. ಸೀತಾರಾಮ ಆಚಾರ್ಯರ ಅಧ್ಯ ಕ್ಷತೆಯಲ್ಲಿ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮAಜೇಶ್ವರ ಇದರ ಆಡಳಿತ ಮುಕ್ತೆಸರ ಎಂ ವೆಂಕಟ ರಮಣ ಆಚಾರ್ಯ ಮುಳಿಗದ್ದೆ ಉದ್ಘಾಟಿಸಿದರು. ಗುಲಾಬಿ ಶ್ರೀಧರಾ ಚಾರ್ಯ ಉಪಸ್ಥಿತರಿದ್ದರು. ಯಜ್ಜೇಶ ಆಚಾರ್ಯ ಶಿಬಿರ ಗೀತೆ ಹಾಡಿದರು. ಎಂ ಕಮಲಾಕ್ಷ ಆಚಾರ್ಯ ಸ್ವಾಗತಿಸಿ, ಸುರೇಶ ಆಚಾರ್ಯ ವಂದಿಸಿದರು. ಮರುದಿನ ನಡೆದ ಸಮರೋಪ ಸಮಾರಂಭದಲ್ಲಿ ಎಂ. ಕಮಲಾಕ್ಷ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಡಾ| ಮನೋಹರ ಆಚಾರ್ಯ ಐಲ, ವೆಂಕಟರಮಣ ಆಚಾರ್ಯ ಎಂ, ರಾಮಚಂದ್ರ ಆಚಾರ್ಯ ಬಳ್ಳೂರು, ಮಂಜುನಾಥ ಆಚಾರ್ಯ ಪೆರು ವಾಯಿ, ವೆಂಕಟರಮಣ ಆಚಾರ್ಯ ಅಟ್ಟಗೋಳಿ, ಸೀತಾರಾಮ ಆಚಾರ್ಯ ಎಂ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮನೋಹರ ಆಚಾರ್ಯರನ್ನು ಗೌರವಿಸಲಾಯಿತು. ಅವರಿಗೆ ಶಾಲು ಹೊದಿಸಿ ಗೌರವಾ ರ್ಪಣೆ ನೀಡಲಾಯಿತು. ಈ ಎರಡು ದಿನದ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡ ಲಾಯಿತು, ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತಿ ಪರ್ತೀಶ ಆಚಾರ್ಯ, ಬಬಿತ ಸತೀಶ ಆಚಾರ್ಯ, ಪವಿತ್ರ ಪಾಂಡು ರಂಗ ಆಚಾರ್ಯ, ಯಶೋಧ ಗೋಪಾಲಕೃಷ್ಣ ಆಚಾರ್ಯ, ಪ್ರವೀಣ ಆಚಾರ್ಯ ಸೋಂಕಲ್, ಯಜ್ಞೇಶ ಆಚಾರ್ಯ ಬಾಯಾರು, ಸ್ವರ್ಣ ಲತಾ ಬಾಯಾರು, ನಾರಾಯಣ ಆಚಾ ರ್ಯ ಎಂ, ವಿದ್ಯಾಜೋತಿ ವಸಂತ ಆಚಾರ್ಯ ಕುಂಬಳೆ, ಕಿರಣ್ ಶರ್ಮ ಮಧೂರು, ಸೀತಾರಾಮಚಾರ್ಯ ಇವರಿಗೂ ಅಭಿನಂದನ ಪತ್ರ ನೀಡಲಾಯಿತು , ಕಮಲಾಕ್ಷ ಆಚಾರ್ಯ ಸ್ವಾಗತಿಸಿ, ವಿಷ್ಣು ಆಚಾರ್ಯ ಎಸ್. ವಂದಿಸಿದರು.