ಬಾಲಕನಿಗೆ ದೌರ್ಜನ್ಯ: ಪೊಲೀಸರಿಂದ ಪೋಕ್ಸೋ ಪ್ರಕರಣ ದಾಖಲು; ತಲೆಮರೆಸಿಕೊಂಡ ಆರೋಪಿ

ಕಾಸರಗೋಡು: 11 ವರ್ಷದ ಗಂಡು ಮಗುವನ್ನು ಕರೆದೊಯ್ದು ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಈ ಮಾಹಿತಿ ತಿಳಿದು ಆರೋಪಿ ಪೆರುಂಬಳ ನಿವಾಸಿ ಹಾರಿಸ್ ತಲೆಮರೆಸಿಕೊಂಡಿ ರುವುದಾಗಿ ತಿಳಿದುಬಂದಿದೆ. ಕೊಲ್ಲಿಗೆ ಪರಾರಿಯಾಗಲು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಿಗೆ  ಪೊಲೀಸರು ಮಾಹಿತಿ ನೀಡಿದ್ದಾರೆಂಬ ಸೂಚನೆ ಲಭಿಸಿದೆ. ನಿನ್ನೆ ಸಂಜೆ ಘಟನೆ ನಡೆದಿದೆ.

ಇದೇ ವೇಳೆ ಇನ್ನೊಂದು ದೂರಿನಲ್ಲಿ ಮಂಜೇಶ್ವರ ಪೊಲೀಸರು ಇನ್ನೊಂದು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಅಂಗಡಿಗೆ ಸಾಮಗ್ರಿ ಖರೀದಿಸಲು ತಲುಪಿದ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ನೀಡಿದ ದೂರಿನಂತೆ ಅಂಗಡಿ ಮಾಲಕನಾದ  ೬೦ರ ವಯಸ್ಸಿನ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ಶನಿವಾರ ನಡೆದ ಘಟನೆಯಾಗಿದೆ. ಬಾಲಕಿ ಮನೆಗೆ ತಲುಪಿ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

You cannot copy contents of this page