ಬಾಲಕಿಗೆ ದೌರ್ಜನ್ಯ 54ರ ಪ್ರಾಯದ ವ್ಯಕ್ತಿ ಸೆರೆ
ಕಣ್ಣೂರು: ೧೨ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದ ೫೪ರ ವ್ಯಕ್ತಿ ಪೋಕ್ಸೋ ಪ್ರಕಾರ ಸೆರೆಯಾಗಿದ್ದಾನೆ. ಎರುವೇಶಿ ಮಣ್ಣಕುಂಡ್ ನಿವಾಸಿ ಬಿಜು ಸಕಾರಿಯನನ್ನು ಕುಡಿಯನ್ಮಲ ಪೊಲೀಸರು ಬಂಧಿಸಿದ್ದಾರೆ. ಚೆಂಬೇರಿಯ ಹೋಟೆಲ್‌ವೊಂದರ ಕಾರ್ಮಿಕನಾಗಿದ್ದಾನೆ ಬಿಜು ಸಕಾರಿಯ.
ಬುಧವಾರ ಘಟನೆ ನಡೆದಿದ್ದು, ಮನೆಯ ಮುಂದೆ ನಿಂತಿದ್ದ ಬಾಲಕಿಯನ್ನು ಹಿಡಿದು ದೌರ್ಜನ್ಯಗೈದಿರುವುದಾಗಿ ಹೇಳಲಾಗುತ್ತಿದೆ. ಬಾಲಕಿ ಬೊಬ್ಬೆಹೊಡೆದ ಕಾರಣ ಆರೋಪಿ ಪರಾರಿಯಾಗಿದ್ದಾನೆ. ಸ್ಥಳೀಯರು ಹಾಗೂ ಪೊಲೀಸರು ನಡೆಸಿದ ಹುಡುಕಾಟದಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.