ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗಾಗಿ ಶೋಧ ಮುಂದುವರಿಕೆ
ಕಾಸರಗೋಡು: ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯಗೈದ ಆರೋಪಿಯ ಬಂಧನಕ್ಕಾಗಿ ಪೊಲೀಸ್ ಕಾರ್ಯಾ ಚರಣೆ ಮುಂದುವರಿದಿದೆ. ಆರೋಪಿಗಾಗಿ ಪ್ರತ್ಯೇಕ ತನಿಖಾ ತಂಡ ಕರ್ನಾಟಕದ ಕೊಡಗು ಸಹಿತ ವಿವಿಧೆಡೆ ಶೋಧ ಮುಂದುವರಿಸಿದೆ. ಆರೋಪಿ ವಿರುದ್ಧ ಮೇಲ್ಪರಂಬ, ಕೊಡಗಿನ ನಾಪೊಕ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ವಿವಿಧ ಪ್ರಕರಣ ಗಳಿವೆ ಎಂದು ತಿಳಿದು ಬಂದಿದೆ. ಪದೇ ಪದೇ ವೇಷ ಪಲ್ಲಟಗೊಳಿಸಿ ತಿರುಗಾಡುತ್ತಿರುವ ಆರೋಪಿ ಇದೀಗ ತಲೆಮರೆಸಿಕೊಂಡಿದ್ದಾನೆ. ಬಾಲಕಿಯನ್ನು ಮನೆಯಿಂದ ಅಪಹರಿಸಿ ಕೊಂಡೊಯ್ಯುವ ವೇಳೆ ಆತನ ಕೈಯಿಂದ ಬಿದ್ದಿದ್ದ ನೋಟೊಂದು ತನಿಖಾ ತಂಡಕ್ಕೆ ಸಿಕ್ಕಿದ್ದು, ಅದನ್ನು ಫಾರೆನ್ಸಿಕ್ ತನಿಖೆಗಾಗಿ ಕಳುಹಿಸಿಕೊಡ ಲಾಗಿದೆ.
ಈ ಹಿಂದೆ ಗಲ್ಫ್‌ನಲ್ಲಿದ್ದ ಆರೋಪಿ ಕೋವಿಡ್ ಕಾಲದಲ್ಲಿ ಊರಿಗೆ ಮರಳಿ ಬಂದಿದ್ದನು. ಅನಂತರ ಸ್ವಲ್ಪ ಕಾಲ ಕಲ್ಲಿನ ಕೆಲಸ ನಿರ್ವಹಿಸಿದ್ದ ಈತ ಅನಂತರ ಮನೆಯಲ್ಲೇ ಇದ್ದನೆಂದು ತಿಳಿದು ಬಂದಿದೆ.