ಬಾಲಕಿಗೆ ವಿವಿಧ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯ : ಮೇಲ್ಪರಂಬ, ವಿದ್ಯಾನಗರ ಠಾಣೆಯಲ್ಲಿ 3 ಪೋಕ್ಸೋ ಕೇಸು ದಾಖಲು

ಕಾಸರಗೋಡು: 14 ವರ್ಷ ಪ್ರಾಯದ ಬಾಲಕಿಯನ್ನು ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿಯ ದೂರಿನಂತೆ ಕೇಸು ದಾಖಲಿಸಲಾಗಿದೆ. 4 ವರ್ಷದ ಹಿಂದೆ ಬಾಲಕಿ ಪ್ರಥಮವಾಗಿ ದೌರ್ಜನ್ಯಕ್ಕೆ ತುತ್ತಾಗಿದ್ದಳು. ಅಂದು ಸಹೋದರಿಯ ಪತಿ ದೇಹವನ್ನು ಅನಾವಶ್ಯಕವಾಗಿ ಸ್ಪರ್ಶಿಸಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಳು. ಆದರೆ ಭಯದಿಂದಾಗಿ ಈ ಬಗ್ಗೆ ಯಾರಲ್ಲೂ ಹೇಳಿರಲಿಲ್ಲವೆನ್ನಲಾಗಿದೆ. ಈ ಹೇಳಿಕೆ ಪ್ರಕಾರ ಸಹೋದರಿಯ ಪತಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಈಗ 17ರ ಹರೆಯದ ಓರ್ವ ತನ್ನನ್ನು ದೌರ್ಜನ್ಯಗೈದಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಈ ಹೇಳಿಕೆಯಂತೆ ದ್ವಿತೀಯ ಪೋಕ್ಸೋ ಕೇಸು ದಾಖಲಿಸಲಾಗಿದೆ. ಈ ಎರಡೂ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ದೇಹವನ್ನು ಅನಾವಶ್ಯಕವಾಗಿ ಸ್ಪರ್ಶಿಸಿರುವುದಾಗಿ 14ರ ಹರೆಯದ ಬಾಲಕಿ ನೀಡಿದ ಇನ್ನೊಂದು ದೂರಿನಲ್ಲಿ ವಿದ್ಯಾನಗರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕೈಯಲ್ಲಿ ಹಿಡಿದು ಆಲಿಂಗಿಸಿರುವು ದಾಗಿ ಬಾಲಕಿ ದೂರು  ನೀಡಿದ್ದಾಳೆ.

You cannot copy contents of this page