ಕೊಲ್ಲಂ: ಕೊಲ್ಲಂನ ಓಯೂರಿನ ಆರು ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಮತ್ತು ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂ ಚಾತನ್ನೂರು ಮಾಂಬಿಳಿ ಕುನ್ನು ಕವಿತಾರಾಜ್ ನಿವಾಸದ ಕೆ.ಆರ್. ಪದ್ಮಕುಮಾರ್ (೫೨), ಆತನ ಪತ್ನಿ ಎಂ.ಆರ್. ಅನಿತಾ ಕುಮಾರಿ (೪೫) ಮತ್ತು ಪುತ್ರಿ ಪಿ. ಅನುಪಮ (೨೦) ಬಂಧಿತ ಆರೋಪಿಗಳು. ಇವರನ್ನು ತಮಿಳುನಾಡಿನ ತೆಂಗಾಶಿಯಿಂದ ಪೊಲೀಸರು ಸೆರೆಹಿಡಿದಿದ್ದಾರೆ.
ಬಂಧಿತ ಆರೋಪಿ ಪದ್ಮ ಕುಮಾರ್ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದನೆಂದೂ ಅದರಿಂದ ಹೊರಬರಲು ಆತ ಮತ್ತು ಕುಟುಂಬದವರು ಸೇರಿ ಬಾಲಕಿಯನ್ನು ಅಪಹರಿಸಿರುವು ದಾಗಿ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಬಂಧಿತ ಆರೋ ಪಿಗಳ ಪೈಕಿ ಪದ್ಮಕುಮಾರ್ ಈ ಹಿಂದೆ ಭಾರೀ ಶ್ರೀಮಂತನಾಗಿದ್ದನು. ಆ ಬಳಿಕ ಲೋನ್ ಆಪ್‌ನಿಂದ ಸಾಲ ಪಡೆದಿ ದ್ದನು. ಮಾತ್ರವಲ್ಲ ಕ್ರೆಡಿಟ್ ಕಾರ್ಡ್ ಮೂಲಕವೂ ಹಣದ ವ್ಯವಹಾರ ನಡೆಸಿದ್ದನು. ಅದರಿಂದ ತನ್ನ ಎಲ್ಲಾ ಸಂಪಾದನೆಯನ್ನೂ ಕಳೆದುಕೊಂಡು ಸಾಲದ ಕೂಪದಲ್ಲಿ ಮುಳುಗಿದ್ದನು. ಹೀಗೆ ಪಡೆದ ಸಾಲವನ್ನು ಮರುಪಾವತಿ ಸಲು ಸಾಧ್ಯವಾಗದೆ ಆತ ಒದ್ದಾಡುತ್ತಿದ್ದನು. ಅದರಿಂದ ಪಾರಾಗಲು ಬಾಲಕಿಯನ್ನು ಅಪಹರಿಸಿ ಅದರ ಹೆಸರಲ್ಲಿ ಆಕೆಯ ಮನೆಯವರಿಂದ ಹತ್ತು ಲಕ್ಷ ರೂ. ಹಣ ಎಗರಿಸುವ ಸ್ಕೆಚ್‌ಗೆ ರೂಪು ನೀಡಿ ಅದರಂತೆ ಆತ ತನ್ನ ಕುಟುಂಬದವರೊಂದಿಗೆ ಬಾಲಕಿಯನ್ನು ಅಪಹರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಕಾರಿನಲ್ಲಿ ಅಪಹರಿ ಸುವ ವೇಳೆ ಆತನ ಜತೆ ಪದ್ಮ ಕುಮಾರ್‌ನ ಸಹೋದರನೂ ಇದ್ದನು. ಆಗ ಸಹೋದರನ ಕೈಗೆ ಪದ್ಮಕುಮಾರ್ ಮತ್ತು ಇತರ ಆರೋಪಿಗಳು ಸೇರಿ ಬೆದರಿಕೆ ಪತ್ರ ನೀಡಿದ್ದರು. ತಾನು ಕೇಳಿದಷ್ಟು ಹಣ ನೀಡಿದಲ್ಲಿ ಬಾಲಕಿಯನ್ನು ಬಿಡುಗಡೆಗೊಳಿಸು ವುದಾಗಿ ಆ ಬೆದರಿಕೆ ಪತ್ರದಲ್ಲಿ ತಿಳಿಸ ಲಾಗಿತ್ತು. ಆದರೆ ಆ ಪತ್ರ ಪಡೆಯಲು ಪದ್ಮಕುಮಾರ್‌ನ ಸಹೋದರ ತಯಾರಾಗಲಿಲ್ಲ. ಆ ಪತ್ರ ಬಾಲಕಿಯನ್ನು ಅಪಹರಿಸಿ ಸಾಗಿಸುವ ದಾರಿ ಮಧ್ಯೆ ಎಲ್ಲೋ ಕಳೆದುಹೋಗಿತ್ತು. ಅದು ಪದ್ಮಕುಮಾರ್‌ನ ಎಲ್ಲಾ ಸಂಚನ್ನು ತಲೆಕೆಳಗಾಗುವಂತೆ ಮಾಡಿದೆ. ಅಪಹರಿಸಲ್ಪಟ್ಟ ಬಾಲಕಿಯನ್ನು ಕೂಡಿ ಹಾಕಿದ್ದ ಕಟ್ಟಡದಲ್ಲಿ ಟಿವಿ ಆನ್ ಮಾಡಿದಾಗ ಬಾಲಕಿ ಅಪಹರಣದ ವಿರುದ್ಧ ಇಡೀ ಊರೇ ಎದ್ದು ತೀವ್ರಪ್ರತಿ ಭಟನೆ ವ್ಯಕ್ತಪಡಿಸುವ ದೃಶ್ಯ ಕಂಡು ಬಂದಾದ ಇನ್ನು ನನಗೆ ಉಳಿಗಾಲ ವಿಲ್ಲ ವೆಂದು ಮನಗಂಡ ಆರೋಪಿಗಳು ಬಾಲಕಿಯನ್ನು ಬಳಿಕ ರಿಕ್ಷಾವೊಂದ ರಲ್ಲಿ ಕೊಲ್ಲಂನ ಮೈದಾನಕ್ಕೆ ತಂದು ಅಲ್ಲಿ ಉಪೇಕ್ಷಿಸಿ ಪರಾರಿಯಾಗಿದ್ದರೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಬಂಧಿತ ಆರೋಪಿಗಳ ಪೈಕಿ ಪದ್ಮಕುಮಾರ್‌ನ ಪುತ್ರಿ ಅನುಪಮ ಯೂ ಟ್ಯೂಬ್‌ವೊಂದರ ತಾರೆಯೂ ಆಗಿದ್ದಾಳೆ. ಯು. ಪದ್ಮನಾಭನ್ ಎಂಬ ಯೂಟ್ಯೂಬ್ ಚ್ಯಾನೆಲ್‌ವೊಂ ದನ್ನು ಆಕೆ ಆರಂಭಿದ್ದು, ೪.೯೯ ಲಕ್ಷ ಸಬ್ ಸ್ಕೈಬರ್ಸ್‌ಗಳನ್ನು ಹೊಂದಿದೆ.