ಬಾಲಕಿಯ ದೇಹಸ್ಪರ್ಶಿಸಿ ಕಿರುಕುಳ: ವೃದ್ಧನ ವಿರುದ್ಧ ಕೇಸು

ಕುಂಬಳೆ: ಬಸ್ ಇಳಿದು ಮನೆಗೆ ನಡೆದುಹೋಗುತ್ತಿದ್ದ ೧೫ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ದೇಹಸ್ಪರ್ಶಿಸಿದ ಆರೋಪದಂತೆ ೬೦ರ ಹರೆಯದ ವೃದ್ಧನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ವಿದ್ಯಾರ್ಥಿನಿ ಮೊನ್ನೆ ಸಂಜೆ ಶಾಲೆಬಿಟ್ಟು ಮನೆಗೆ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಷಯವನ್ನು ಬಾಲಕಿ ಮನೆಯವರಲ್ಲಿ ತಿಳಿಸಿದ್ದಾಳೆ.  ಬಳಿಕ ಮನೆಯವರು ಪೊಲೀಸ್ ಠಾಣೆಗೆ ತಲುಪಿ ನೀಡಿದ ದೂರಿನಂತೆ ಕಂಡರೆ ಗುರುತುಹಚ್ಚಬಹುದಾದ ವ್ಯಕ್ತಿ ವಿರುದ್ದ ಕೇಸು ದಾಖಲಿಸಲಾಗಿದೆ.

You cannot copy contents of this page