ಬಾಳೆ ಕಡಿದು ತೆರವುಗೊಳಿಸಿದ ಪ್ರಕರಣ ಕೃಷಿಕನಿಗೆ ನಷ್ಟ ಪರಿಹಾರ

ಕೋದಮಂಗಲಂ: ಇಲ್ಲಿನ ವಾರ ಪೆಟ್ಟಿಯಲ್ಲಿ ಕೆಎಸ್‌ಇಬಿ ನೌಕರರು ಬಾಳೆ ತೋಟವನ್ನು ಕಡಿದು ನಾಶ ಗೊಳಿಸಿದ ಘಟನೆಯಲ್ಲಿ ಕೃಷಿಕ ಥೋಮಸ್‌ರಿಗೆ ನಷ್ಟ ಪರಿಹಾರ ನೀಡಲಾಯಿತು. ಶಾಸಕ ಆಂಟನಿ ಜೋನ್ ನೇರವಾಗಿ ತಲುಪಿ ಮೂರೂವರೆ ಲಕ್ಷ ರೂ.ವನ್ನು ಹಸ್ತಾಂತರಿಸಿದ್ದಾರೆ. ನಷ್ಟ ಪರಿಹಾರ ಲಭಿಸಿರುವುದರಿಂದಾಗಿ ಸಂತೋಷ ವಾಗಿದೆ ಎಂದು ಥೋಮಸ್ ಪ್ರತಿಕ್ರಿಯಿಸಿದ್ದಾರೆ. ಅಪಾಯ ಸಾಧ್ಯತೆ ಇದೆ ಎಂದು ಕೃಷಿಕರಿಗೆ ಮುಂದಾಗಿ ತಿಳಿಸುವುದರಲ್ಲಿ ಲೋಪವುಂಟಾಗಿದೆ. ಬಾಳೆಯನ್ನು ಕಡಿದು ತೆರವುಗೊಳಿಸಿದ ಕಾರಣ ಭಾರೀ ಆರ್ಥಿಕ ನಷ್ಟ ಕೃಷಿಕನಿಗೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಷ್ಟ್ಟ ಪರಿಹಾರ ನೀಡಲಾಗಿದೆ.

RELATED NEWS

You cannot copy contents of this page