ಬಾವಿ ಶುದ್ಧೀಕರಿಸುವ ವೇಳೆ ಹಗ್ಗ ತುಂಡಾಗಿ ಬಿದ್ದ ಕಾರ್ಮಿಕನ ರಕ್ಷಣೆ
ಕಾಸರಗೋಡು: 17 ಅಡಿ ಆಳದ ಬಾವಿ ಶುಚೀಕರಿಸಲೆಂದು ಹಗ್ಗದ ಸಹಾಯದಿಂದ ಇಳಿಯುತ್ತಿದ್ದ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದ ಕಾರ್ಮಿಕನನ್ನು ಅಗ್ನಿಶಾಮಕದಳ ಆಗಮಿಸಿ ರಕ್ಷಿಸಿದ ಘಟನೆ ನಡೆದಿದೆ.
ರಾಜಪುರಂ ಪನ್ನಿಕುನ್ನಿನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಪನ್ನಿಕುನ್ನಿನ ಅಲೀಸ್ ಎಂಬವರ ಬಾವಿ ಶುಚೀಕರಿಸಲೆಂದು ಮುಂಡೋಟ್ ಮೇಲತ್ತ್‌ನ ಜೋನ್‌ಸನ್ (೪೫) ಎಂಬವರು ಈ ೧೭ ಅಡಿ ಆಳದ ಬಾವಿಗೆ ಇಳಿಯುತ್ತಿದ್ದ ವೇಳೆ ಹಗ್ಗ ದಿಢೀರ್ ಆಗಿ ತುಂಡಾಗಿ ಅವರು ಬಾವಿಗೆ ಬಿದ್ದಿದ್ದಾರೆ. ಆ ಬಗ್ಗೆ ನೀಡಲಾದ ದೂರಿ ನಂತೆ ಕುಟ್ಟಿಕ್ಕೋಲು ಅಗ್ನಿಶಾಮಕದಳ ದವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಾವಿಗಿಳಿದು ಜೋನ್‌ಸನ್‌ರನ್ನು ಮೇಲಕ್ಕೆತ್ತಿ ರಕ್ಷಿಸಿದರು. ಗಾಯಗೊಂಡಿ ರುವ ಜೋನ್‌ಸನ್‌ರನ್ನು ಬಳಿಕ ಕಣ್ಣೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.