ಬಿಎಂಎಸ್‌ಆರ್‌ಎ ಜಿಲ್ಲಾ ವಾರ್ಷಿಕ ಸಮ್ಮೇಳನ, ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಬಿಎಂಎಸ್ ಆರ್‌ಎ ಜಿಲ್ಲಾ ವಾರ್ಷಿಕ ಸಮ್ಮೇಳನ ಇತ್ತೀಚೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪ ವಸತಿಗೃಹದಲ್ಲಿ ಜರಗಿತು. ಬಿಎಂಎಸ್‌ಆರ್‌ಎ ಜಿಲ್ಲಾ ಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿ ದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಸುರೇಶ್ ಕುಮಾರ್ ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್, ಬಿಎಂಎಸ್‌ಆರ್‌ಎ ರಾಜ್ಯ ಕಾರ್ಯದರ್ಶಿ ಮನೀಶ್ ಬಿ ಶುಭ ಕೋರಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ್ ವಾರ್ಷಿಕ ವರದಿ, ಕೋಶಾಧಿಕಾರಿ ಅರುಣ್ ಆರ್ಥಿಕ ವರದಿ ಮಂಡಿಸಿ ದರು. ಜಿಲ್ಲಾ ಪ್ರಭಾರಿ ಜಯದೀಪ್ ಕಣ್ಣೂರು ಚರ್ಚೆಗೆ ನೇತೃತ್ವ ನೀಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ತೇಜಸ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸಂದೀಪ್ ಬದಿಯಡ್ಕ ವಂದಿಸಿದರು. ಜಿಲ್ಲಾಧ್ಯಕ್ಷರಾಗಿ ಹರಿಪ್ರಸಾದ್, ಕಾರ್ಯದರ್ಶಿಯಾಗಿ ತೇಜಸ್ ಕೆ, ಕೋಶಾಧಿಕಾರಿಯಾಗಿ ಅರುಣ್ ಬಿ ಆಯ್ಕೆಯಾದರು.