ಬಿಎಂಎಸ್ ಕುಂಬಳೆ ವಲಯ ಕಾರ್ಯಕರ್ತರ ಸಮಾವೇಶ

ಉಪ್ಪಳ: ಬಿ.ಎಂ.ಎಸ್ ಕುಂಬಳೆ ವಲಯ ಸಮಿತಿಯ ಕಾರ್ಯಕರ್ತರ ಸಮಾವೇಶ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆಯಿತು. ವಲಯ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಉದ್ಘಾಟಿಸಿ ಮಾತನಾಡಿ ಮುಂದಿನ ಒಂದÀÄ ವರ್ಷದ ಕಾರ್ಯಕ್ರಮಗಳನ್ನು ವಿವರಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಗಳಾದ ಲೀಲಾಕೃಷ್ಣ ಮುಳ್ಳೇರಿಯ, ಹರೀಶ್ ಕುದ್ರೆ ಪಾಡಿ, ಅಂಗನವಾಡಿ ವರ್ಕರ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಶೋಭಾ ಬಾಲರಾಜ್ ,ಶುಭ ಕೋರಿದರು. ವಲಯ ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

You cannot copy contents of this page