ಬಿಎಂಎಸ್ ಕುಂಬ್ಡಾಜೆ ಪಂ. ಸಮಿತಿ ಕುಟುಂಬ ಸಂಗಮ
ಕುಂಬ್ಡಾಜೆ: ಬಿಎಂಎಸ್ ಕುಂಬ್ಡಾಜೆ ಪಂಚಾಯತ್ ಸಮಿತಿ ಕುಟುಂಬ ಸಂಗಮ ಪೊಡಿಪ್ಪಳ್ಳ ಶ್ರೀ ಶಾರದಾಂಬ ಬಾಲಗೋಕುಲದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಸಹ ಕಾರ್ಯದರ್ಶಿ ದಿನೇಶನ್ ಉದ್ಘಾಟಿಸಿದರು. ಬಿಎಂಎಸ್ ಪಂ. ಸಮಿತಿ ಅಧ್ಯಕ್ಷ ನಾರಾಯಣ ಪದ್ಮಾರ್, ವಲಯ ಕಾರ್ಯದರ್ಶಿ ಸದಾಶಿವ ಪಣಿಯೆ, ಆರ್‌ಎಸ್‌ಎಸ್ ಕುಂಬ್ಡಾಜೆ ಮಂಡಲ ಕಾರ್ಯ ವಾಹ್ ಕೃಷ್ಣಪ್ರಸಾದ್, ವಲಯ ಸದಸ್ಯ ರಾಮಕೃಷ್ಣ ಪೊಡಿಪ್ಪಳ್ಳ, ಕೋಶಾಧಿಕಾರಿ ವಿಜಯ ಕುಮಾರ್ ಕುರುಮುಜ್ಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎಂಎಸ್‌ನ ಹಿರಿಯ ಸದಸ್ಯ ಕೃಷ್ಣ ರೈ ಬೆಳಿಂಜ ಇವರನ್ನು ಸನ್ಮಾನಿಸಲಾಯಿತು. ಬಿಎಂಎಸ್ ಕುಂಬ್ಡಾಜೆ ಪಂ. ಸಮಿತಿ ಕಾರ್ಯದರ್ಶಿ ಪ್ರಕಾಶ್ ಪಾವೂರು ಸ್ವಾಗತಿಸಿ, ದಾಮೋದರ ಮಾರ್ಪನಡ್ಕ ವಂದಿಸಿದರು.