ಬಿಎಂಎಸ್ ಕುದ್ರೆಪ್ಪಾಡಿ ಘಟಕದಿಂದ ಆಂಬುಲೆನ್ಸ್ ಹಸ್ತಾಂತರ
ಸೀತಾಂಗೋಳಿ: ಬಿಎಂಎಸ್ ಕುದ್ರೆಪ್ಪಾಡಿ ಘಟಕದ ಸಹಕಾರದಲ್ಲಿ ದಾನಿಗಳ ಬೆಂಬಲದಿಂದ ಖರೀದಿಸಿದ ಆಂಬುಲೆನ್ಸ್‌ನ್ನು ಕುದ್ರೆಪ್ಪಾಡಿ ಸ್ಕಂದ ಸೇವಾ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಇದರ ಲೋಕಾರ್ಪಣೆ ಕಾರ್ಯಕ್ರಮ ಕುದ್ರೆಪ್ಪಾಡಿ ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪರಿಸರದಲ್ಲಿ ಜರಗಿತು. ಸ್ಕಂದ ಸೇವಾ ಟ್ರಸ್ಟ್ ಅಧ್ಯಕ್ಷ ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು.
ಸೇವಾ ಭಾರತಿ ಜಿಲ್ಲಾಧ್ಯಕ್ಷ ಎಂ.ಟಿ. ದಿನೇಶ್ ಆಂಬುಲೆನ್ಸ್ ಲೋ ಕಾರ್ಪಣೆಗೈದರು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ, ಆರ್‌ಎಸ್‌ಎಸ್ ಜಿಲ್ಲಾ ಸಂಪರ್ಕ್ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ಸ್ಕಂದ ಸೇವಾಟ್ರಸ್ಟ್ ಗೌರವಾಧ್ಯಕ್ಷ ಸುಕುಮಾರ್ ಕುದ್ರೆಪ್ಪಾಡಿ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಗುರುದಾಸ್ ಚೇನ ಕ್ಕೋಡ್ ಶುಭ ಕೋರಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯ ದರ್ಶಿ ಹರೀಶ್ ಸಿದ್ದಿಬೈಲು ಸ್ವಾಗತಿಸಿ, ಸ್ಕಂದ ಸೇವಾ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ವಂದಿಸಿದರು.