ಬಿಎಂಎಸ್ ಮುಳಿಯಾರು ಪಂ. ಸಮಿತಿ ಕುಟುಂಬ ಸಂಗಮ
ಮುಳಿಯಾರು: ಬಿಎಂಎಸ್ ಮುಳಿಯಾರು ಪಂಚಾಯತ್ ಸಮಿತಿ ಕುಟುಂಬ ಸಂಗಮವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯ ಉದ್ಘಾಟಿಸಿದರು. ಬಿಎಂಎಸ್ ಮುಳಿಯಾರು ಪಂ. ಸಮಿತಿ ಅಧ್ಯಕ್ಷ ವೇಣುಗೋಪಾಲನ್ ಅಮ್ಮಂ ಗೋಡು ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯ ವಲಯ ಅಧ್ಯಕ್ಷ ಆನಂದ ಸಿ.ಎಚ್, ಪಂಚಾಯತ್ ಪ್ರಭಾರಿ ವಿನು ಮುಳ್ಳೇರಿಯ ಶುಭ ಕೋರಿದರು. ಪಂ. ಕಾರ್ಯದರ್ಶಿ ಪ್ರಕಾಶನ್ ಪಾತನಡ್ಕ ಸ್ವಾಗತಿಸಿ, ನಳಿನಾಕ್ಷನ್ ಚಿಪ್ಲಿಕಯ ವಂದಿಸಿ ದರು. ಗೋಪಾಲನ್ ಕಾನತ್ತೂರು ಮಜ್ದೂರ್ ಗೀತೆ ಹಾಡಿದರು. ಹಿರಿಯ ನಾಗರಿಕರನ್ನು ಪ್ಲಸ್ ಟು ಎಸ್‌ಎಸ್‌ಎಲ್‌ಸಿಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿಎಂಎಸ್ ಆರ್.ಎ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ಸಮಾರೋಪ ಭಾಷಣ ಮಾಡಿದರು.