ಬಿಜೆಪಿಯ ವಿಕಸಿತ್ ಕೇರಳ ಸಮಾವೇಶ ಕಾಸರಗೋಡಿನಲ್ಲಿ ಆರಂಭ: ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಕೇರಳದ ಅಭಿವೃದ್ಧಿ ಸಾಧ್ಯ-ರಾಜೀವ್ ಚಂದ್ರಶೇಖರ್
ಕಾಸರಗೋಡು: ಬಿಜೆಪಿಯ ವಿಕ ಸಿತ್ ಕೇರಳ ಸಮಾವೇಶ ಇಂದು ಬೆಳಿಗ್ಗೆ ಕಾಸರಗೋಡಿನಲ್ಲಿ ಆರಂಭಗೊಂಡಿತು. ನಗರದ ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಾಲ್ ಸಭಾಂಗಣದಲ್ಲಿ ನಡೆಯುವ ಸಮಾವೇಶವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇ ಖರ್ ಉದ್ಘಾಟಿಸಿದರು. ಅವರು ಮಾತನಾಡಿ, ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಕೇರಳದ ಅಭಿವೃದ್ಧಿ ಸಾಧ್ಯ. ಅದು ಬಿಜೆಪಿಯ ಗುರಿಯಾಗಿದೆ ಎಂದು ತಿಳಿಸಿದರು. ಬಿಜೆಪಿಯ ಅಭಿವೃದ್ಧಿ ಯೋಜನೆ ಕೇವಲ ಭರವಸೆಯಲ್ಲ. ಅದು ಜನರ ಕಷ್ಟಗಳಿಗೆ ಪರಿಹಾರ ಕಾಣುವ ಉದ್ದೇಶವಾಗಿದೆ. ಮಾತ್ರವಲ್ಲದೆ ಯುವಕರ ಕನಸನ್ನು ನನಸಾಗಿಸುವುದು ಬಿಜೆಪಿಯ ಪ್ರಧಾನ ಗುರಿಯಾಗಿದೆ ಎಂದು ತಿಳಿಸಿದರು. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ಮಾಜಿ ರಾಜ್ಯ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್ ಮುಖ್ಯ ಭಾಷಣ ನಡೆಸಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ, ರಾಜ್ಯ ಕಾರ್ಯದರ್ಶಿಗಳಾದ ಎಸ್. ಸುರೇಶ್, ಕೆ. ಶ್ರೀಕಾಂತ್, ರಾಜ್ಯ ಮೀಡಿಯ, ಸೋಶ್ಯಲ್ ಮೀಡಿಯಾ ಪ್ರಭಾರಿ ಅನೂಪ್ ಆಂಟನಿ, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ನಾರಾಯಣ ಭಟ್, ಮಾಜಿ ಜಿಲ್ಲಾ ಉಪಾಧ್ಯಕ್ಷ ವಿ. ರವೀಂದ್ರನ್, ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಸಹಿತ ಹಲವರು ನೇತಾರರು ಉಪಸ್ಥಿತರಿದ್ದಾರೆ.
ಸಮಾವೇಶದಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಇದೇ ವೇಳೆ ಸಮಾವೇಶ ಮುಂಚಿತವಾಗಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್‌ರಿಗೆ ನಗರದ ಹೊಸ ಬಸ್ ನಿಲ್ದಾಣದಿಂದ ನೇತಾರರು ಹಾಗೂ ಕಾರ್ಯಕರ್ತರು ಸೇರಿ ಅದ್ದೂರಿಯ ಸ್ವಾಗತ ನೀಡಿದರು.