ಬಿಜೆಪಿ ಕುಂಬಳೆ ಮಂಡಲ ಸಮಿತಿ ಸಭೆ
ಉಪ್ಪಳ: ಭಾರತೀಯ ಜನತಾ ಪಕ್ಷದ ಕುಂಬಳೆ ಮಂಡಲ ಸಮಿತಿಯ ಆಶ್ರಯದಲ್ಲಿ ಜರಗಿದ ಸದಸ್ಯತನ ಅಭಿಯಾನದ ಸಮಾಲೋಚನಾ ಸಭೆ ಎಡನಾಡು ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪರ, ರಾಜ್ಯ ಸಮಿತಿ ಸದಸ್ಯೆ ಕೋಳಾರು ಸತೀಶ್ಚಂದ್ರ ಭಂಡಾರಿ ಮತ್ತು ಜನ ಪ್ರತಿನಿಧಿಗಳು, ಮಂಡಲ ಸಮಿತಿ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ‘ಅನಿಲ್ ಕುಮಾರ್ ಕೆ.ಪಿ. ಸ್ವಾಗತಿಸಿ, ವಸಂತ ಕುಮಾರ್ ಮಯ್ಯ ವಂದಿಸಿದರು.